ಸುಳ್ಯ ತಾಲೂಕಿನಲ್ಲಿ ಹೆಚ್ಚುತ್ತಿರುವ ಚುನಾವಣಾ ಬಹಿಷ್ಕಾರದ ಬ್ಯಾನರ್ :ಗೋಂಟಡ್ಕದಲ್ಲಿ ಮೂಡೆಕಲ್ಲು -ಬಾಜಿನಡ್ಕ ನಿವಾಸಿಗಳಿಂದ ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಕೆ
ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ನಿರಂತರವಾಗಿ ಮತದಾನ ಬಹಿಷ್ಕಾರದ ಬ್ಯಾನರ್ ಗಳು ಪ್ರತ್ಯಕ್ಷವಾಗುತ್ತಿದೆ.
ಚುನಾವಣೆ ಸಮೀಪಿಸುತ್ತಿದ್ದಂತೆ ಸ್ಥಳೀಯ ನಿವಾಸಿಗಳು ತಮ್ಮ ಬೇಡಿಕೆಗಳನ್ನು ಆಗ್ರಹಿಸಿ ಆಕ್ರೋಶಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಅದೇ ಸಾಲಿಗೆ ಸುಳ್ಯದ ಗೋಂಟಡ್ಕ ಪರಿಸರವು ಸೇರಿಕೊಂಡಿದೆ.

ಗೋಂಟಡ್ಕದಿಂದ ಮೂಡೆಕಲ್ಲು- ಬಾಜಿನಡ್ಕಗೆ ಹೋಗುವ ರಸ್ತೆ ಅಭಿವೃದ್ಧಿ ಮತ್ತು ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಮಾಡಲು ಆಗ್ರಹಿಸಿ ಮಾರ್ಚ್ 14ರಂದು ಸಂಜೆ ಗೋಂಟಡ್ಕದಲ್ಲಿ ಆ ಭಾಗದ ನಿವಾಸಿಗಳು ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದಾರೆ.
ಈ ಬಗ್ಗೆ ಹಲವು ಬಾರಿ ಜನಪ್ರತಿನಿಧಿಗಳಿಗೆ ಹಾಗೂ ನಗರ ಪಂಚಾಯತ್ ಮನವಿ ಸಲ್ಲಿಸಿದರೂ ಜನಪ್ರತಿನಿಧಿಗಳ ಟೊಳ್ಳು ಭರವಸೆಗೆ ಬೇಸತ್ತು ಮತದಾನ ಬಹಿಷ್ಕಾರ ನಿರ್ಧರಿಸಿವುದಾಗಿ ಬ್ಯಾನರ್ ನಲ್ಲಿ ಹಾಕಲಾಗಿದೆ.