ಸುಳ್ಯ ಸರ್ಕಾರಿ ಆಸ್ಪತ್ರೆಯಿಂದ ರೋಗಿಯನ್ನು ಮಂಗಳೂರಿಗೆ ಕರೆದೊಯ್ಯುತ್ತಿದ್ದ ಖಾಸಗಿ ಸಂಸ್ಥೆಯ ಆಂಬುಲೆನ್ಸ್ ಮಂಗಳೂರಿನಲ್ಲಿ ಅಪಘಾತ
ಸುಳ್ಯ ಸರ್ಕಾರಿ ಆಸ್ಪತ್ರೆಯಿಂದ ರೋಗಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಸಂದರ್ಭ ಅಡ್ಯಾರ್ ಕಣ್ಣೂರು ಬಳಿ ಆಂಬುಲೆನ್ಸ್ ವಾಹನ ಮುಂಭಾಗದಲ್ಲಿ ಚಲಿಸುತ್ತಿದ್ದ ಪಿಕಪ್ ಗೆ ಡಿಕ್ಕಿ ಸಂಭವಿಸಿದ ಘಟನೆ ಜನವರಿ 27ರಂದು ನಡೆದಿದೆ.

ಸುಳ್ಯದ ಆಲಟ್ಟಿ ಗ್ರಾಮದ ಎಲಿಕ್ಕಳ ನಿವಾಸಿ ಆನಂದ ಎಂಬುವವರನ್ನು ಶ್ವಾಸದ ಸಮಸ್ಯೆ ಕಾರಣ ಸುಳ್ಯ ಜ್ಯೋತಿ ಆಸ್ಪತ್ರೆಯ ಶ್ರೀ ಪುಟ್ಟಪರ್ತಿ ಜೋಶಿ ಚಾರಿಟೇಬಲ್ ಟ್ರಸ್ಟ್ ಆಂಬುಲೆನ್ಸ್ ನಲ್ಲಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ತಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯುವ ಸಂದರ್ಭ
ಅಡ್ಯಾರ್ ಕಣ್ಣೂರು ಬಳಿ ಅಂಬುಲೆನ್ಸಿನ ಮುಂಭಾಗದಲ್ಲಿ ಚಲಿಸುತ್ತಿದ್ದ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.

ಘಟನೆಯಿಂದ ಅಂಬುಲೆನ್ಸ್ ಚಾಲಕ ಸುಳ್ಯ ಜಯನಗರ ನಿವಾಸಿ ಪ್ರಶಾಂತ್ ಎಂಬವರು ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದು ವಾಹನ ಜಖಂಗೊಂಡಿರುತ್ತದೆ.
ಅಂಬುಲೆನ್ಸಿನಲ್ಲಿ ಇದ್ದ ರೋಗಿಯು ಮೃತ ಪಟ್ಟಿದ್ದು ಅಪಘಾತಕ್ಕೆ ಮುನ್ನವೇ ರೋಗಿ ದಾರಿ ನಡುವೆ ಮೃತ ಹೊಂದಿದರು ಎಂದು ತಿಳಿದುಬಂದಿದೆ.
ಹೆಚ್ಚಿನ ಮಾಹಿತಿ ಇನ್ನು ತಿಳಿಯಬೇಕಾಗಿದೆ.