‘ಪ್ಲಾಸ್ಟಿಕ್ ಮುಕ್ತ ಬೆಳಂದೂರು’ ಈಡನ್ ಗ್ಲೋಬಲ್ ಸ್ಕೂಲ್’ನಿಂದ ಸ್ವಚ್ಛತಾ ಅಭಿಯಾನ
ಪುತ್ತೂರು: ಗಣರಾಜ್ಯೋತ್ಸವದ ಅಂಗವಾಗಿ ಬೆಳಂದೂರು ಗ್ರಾಮದಲ್ಲಿ ಪ್ಲಾಸ್ಟಿಕ್ ಮುಕ್ತ ಬೆಳಂದೂರು ಎಂಬ ಅಭಿಯಾನವನ್ನು ಮಾಡಲಾಯಿತು.

ಈ ಅಭಿಯಾನಕ್ಕೆ ಶಾಲಾ ಸಮಿತಿ ಸದಸ್ಯರಾದ ಪುತ್ತುಬಾವ ಹಾಜಿ ಚಾಲನೆ ನೀಡಿದರು. ಬೆಳಂದೂರು ಗ್ರಾ.ಪಂ ಪಿ.ಡಿ.ಒ ನಾರಾಯಣ, ಶಾಲಾ ಪ್ರಾಂಶುಪಾಲ ಮಹಮ್ಮದ್ ರಂಝಿ ಕೆ.ಪಿ, ಮಹಮ್ಮದ್ ನೌಫಲ್ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಬೆಳಂದೂರು ಪರಿಸರದಲ್ಲಿ ಸ್ವಚ್ಛತೆಯನ್ನು ಮಾಡಿ ಗ್ರಾಮದ ಜನರಿಗೆ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮದ ಬಗ್ಗೆ ಸಂದೇಶ ನೀಡಿದರು. ಗ್ರಾಮಸ್ಥರು ಮತ್ತು ಬೆಳಂದೂರು ಗ್ರಾ.ಪಂ ಸದಸ್ಯರು ಸಹಕರಿಸಿದರು.

ಗ್ರಾಮದ ಜನರಿಗೆ ಪ್ಲಾಸ್ಟಿಕ್ ಬಳಕೆಯ ಅಪಾಯದ ಕುರಿತು ಶಾಲಾ ವಿದ್ಯಾರ್ಥಿನಿ ಸಹ್ಲ ಮಾತನಾಡಿದರು. ಶಿಕ್ಷಕ ಮಹಮ್ಮದ್ ಶಕೂರ್ ಹಾಗೂ ದಿವ್ಯ ಕಾರ್ಯಕ್ರಮ ಸಂಯೋಜಿಸಿದರು. ಕಾರ್ಯಕ್ರಮದಲ್ಲಿ ಅಬ್ದುಲ್ ಸಮೀರ್, ಇಮ್ತಿಯಾಝ್, ಶಿಕ್ಷಕಿಯರಾದ ಕು.ಸನಾ, ಸ್ಮಿತ, ಮುನೈಝಾ, ಕು.ಪ್ರಜ್ವಲ, ಅಮೃತ ನಾಯ್ಕ್ ಮತ್ತು ಶಿಕ್ಷಕೇತರ ಸಿಬ್ಬಂದಿ ಲಕ್ಷ್ಮಿ ಭಾಗವಹಿಸಿದ್ದರು.
ವಿದ್ಯಾರ್ಥಿಗಳ ಸ್ವಚ್ಛತಾ ಕಾರ್ಯಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಯಿತು.