ಶಾಲೆಗೆಂದು ಹೋಗಿ ನಾಪತ್ತೆಯಾಗಿದ್ದ ವಿದ್ಯಾರ್ಥಿಗಳು ಪತ್ತೆ
ಈಶ್ವರಮಂಗಲ: ಕರ್ನೂರು ಸಮೀಪದ ಇಬ್ಬರು ವಿಧ್ಯಾರ್ಥಿಗಳು ಶಾಲೆಗೆ ಎಂದು ಹೋದವರು ನಾಪತ್ತೆಯಾಗಿದ್ದು ಆ ಬಳಿಕ ನಡೆಸಿದ ಹುಡುಕಾಟದಲ್ಲಿ ಕ್ಯಾಲಿಕಟ್ ನಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಶಾಲೆಗೆಂದು ಮನೆಯಿಂದ ಹೊರಟು ಹೋದವರು ಅತ್ತ ಶಾಲೆಗೂ ಹೋಗದೆ ಮನೆಗೂ ಹೋಗದೆ ನಾಪತ್ತೆಯಾಗಿದ್ದರು. ಈ ಬಗ್ಗೆ ವಿದ್ಯಾರ್ಥಿಗಳ ಮನೆಯವರು ಪೊಲೀಸ್ ದೂರು ನೀಡಿದ್ದರು. ಅಲ್ಲದೇ ಸಾಮಾಜಿಕ ಜಾಲ ತಾಣದಲ್ಲಿ ವಿದ್ಯಾರ್ಥಿಗಳ ಫೋಟೋ ಹಾಕಿ ಪತ್ತೆಗೆ ಮನವಿ ಮಾಡಲಾಗಿತ್ತು.
ಇದೀಗ ವಿದ್ಯಾರ್ಥಿಗಳ ಪತ್ತೆ ಆಗುವುದರೊಂದಿಗೆ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.