ಪುತ್ತೂರು: ಅನಧಿಕೃತ ಬ್ಯಾನರ್, ಕಟೌಟ್ ತೆರವು ಮಾಡಲು ನಗರಸಭೆ ಸೂಚನೆ: ಇಂದಿನಿಂದ ತೆರವು ಕಾರ್ಯಾಚರಣೆ
ಪುತ್ತೂರು: ನಗರಸಭೆ ವ್ಯಾಪ್ತಿಯ ರಸ್ತೆ ಬದಿ ಅಥವಾ ಇತರ ಸಾರ್ವಜನಿಕ ಸ್ಥಳಗಳಲ್ಲಿ ಪರವಾನಿಗೆ ಪಡೆದುಕೊಳ್ಳದೇ ಅಳವಡಿಸಿರುವ ಜಾಹೀರಾತು ಬ್ಯಾನರ್ ಮತ್ತು ಕಟೌಟ್ ಗಳನ್ನು ತೆರವು ಮಾಡಬೇಕು, ಜ.11ರಿಂದಲೇ ನಗರಸಭೆ ವತಿಯಿಂದ ತೆರವು ಕಾರ್ಯಾಚರಣೆ ನಡೆಯಲಿದೆ ಎಂದು ನಗರಸಭೆ ಪ್ರಕಟಣೆ ತಿಳಿಸಿದೆ.
ನಗರಸಭೆಯಿಂದ ಅನುಮತಿ ಪಡೆದು ಅಳವಡಿಸಲಾಗಿರುವ ಜಾಹೀರಾತು ಬ್ಯಾನರ್ ಮತ್ತು ಕಟೌಟ್ ಹೊರತು ಪಡಿಸಿ ಅನುಮತಿ ಇಲ್ಲದೇ ಅಳವಡಿಸಿರುವ ಬ್ಯಾನರ್ ಮತ್ತು ಕಟೌಟ್‌ಗಳಿಗೆ ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಅಳವಡಿಸಲು ಅನುಮತಿ ಪಡೆಯಲು ಸಕಾಲ ಸೇವೆಯಲ್ಲಿ ಅರ್ಜಿ ಸಲ್ಲಿಸಿ ಶುಲ್ಕ ಪಾವತಿ ಮಾಡಬೇಕು. ತಪ್ಪಿದಲ್ಲಿ ಎಲ್ಲಾ ವಿಧದ ಅನಧಿಕೃತ ಜಾಹಿರಾತು ಬ್ಯಾನರ್ ಹಾಗೂ ಕಟೌಟ್ ತೆರವುಗೊಳಿಸಿ ಅಳವಡಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು.
ಜ.11ರಂದು ಅನಧಿಕೃತ ಜಾಹಿರಾತು ಬ್ಯಾನರ್ ಮತ್ತು ಕಟೌಟ್‌ಗಳ ತೆರವು ಕಾರ್ಯಾಚರಣೆ ನಡೆಯಲಿದೆ ಎಂದು ನಗರಸಭೆ ಪ್ರಕಟಣೆ ತಿಳಿಸಿದೆ.