ಉಪ್ಪಿನಂಗಡಿ: ಗ್ರಾಹಕರ ಸೋಗಿನಲ್ಲಿ ಬಂದು ಪರ್ಸ್ ಕದ್ದು ವ್ಯಕ್ತಿ ಪರಾರಿಯಾದ ಕಳ್ಳ
ಉಪ್ಪಿನಂಗಡಿ: ಗ್ರಾಹಕನ ಸೋಗಿನಲ್ಲಿ ಬಂದು ಕ್ಯಾಶ್ ಕೌಂಟರ್‌ನಲ್ಲಿದ್ದ 7,500 ರೂಪಾಯಿ ಹಾಗೂ ದಾಖಲೆಪತ್ರಗಳಿದ್ದ ಪರ್ಸ್ ನ್ನು ಎಗರಿಸಿದ ಘಟನೆ ವರದಿಯಾಗಿದೆ.

ಉಪ್ಪಿನಂಗಡಿ ಬ್ಯಾಂಕ್ ರಸ್ತೆಯಲ್ಲಿನ ಮಡಿಕೆ ಮತ್ತಿತರ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗೆ ಬಂದ ಸುಮಾರು 60 ವರ್ಷ ವಯೋಮಾನದ ವ್ಯಕ್ತಿ ಹತ್ತು ರೂಪಾಯಿ ಮೌಲ್ಯದ ಪಾನೀಯವನ್ನು ಖರೀದಿಸಿ, ಅಂಗಡಿ ಮಾಲಕ ಅನ್ಯ ಗ್ರಾಹಕರೊಂದಿಗೆ ವ್ಯವಹರಿಸುತ್ತಿರುವ ವೇಳೆ ಅಂಗಡಿಯ ಕ್ಯಾಶ್ ಕೌಂಟರ್ ನಲ್ಲಿದ್ದ ಪರ್ಸನ್ನೇ ಎಗರಿಸಿ ಪರಾರಿಯಾಗಿದ್ದಾನೆ.
7500 ರೂ ನಗದು ಹಾಗೂ ಇನ್ನಿತರ ಪ್ರಮುಖ ದಾಖಲೆ ಪತ್ರಗಳಿದ್ದ ಪರ್ಸನ್ನು ಎಗರಿಸಿದ ಕಳ್ಳ ಅಟೋ ರಿಕ್ಷಾವೊಂದರಲ್ಲಿ ನೆಕ್ಕಿಲಾಡಿವರೆಗೆ ಪ್ರಯಾಣಿಸಿ ಅಲ್ಲಿಂದ ಕಣ್ಮರೆಯಾಗಿದ್ದಾನೆ.
ಪ್ರಕರಣದ ಬಗ್ಗೆ ಪೊಲೀಸರಿಗೆ ದೂರು ನೀಡಿಲ್ಲವಾದರೂ, ಗ್ರಾಹಕರ ಸೋಗಿನಲ್ಲಿ ಬಂದು ಕಳ್ಳತನ ನಡೆಸುವವರ ಬಗ್ಗೆ ಎಚ್ಚರ ವಹಿಸಬೇಕಾದ ಕಾರಣಕ್ಕೆ ಉಪ್ಪಿನಂಗಡಿ ವರ್ತಕ ಸಂಘದ ಸದಸ್ಯರು ಘಟನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.



