ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಿದ್ದ ಇಬ್ಬರು ಯುವಕರ ಬರ್ಬರ ಕೊಲೆ
ಹೊನಲು ಬೆಳಕಿನ ಕ್ರಿಕೆಟ್ ಆಡುತ್ತಿದ್ದ ಇಬ್ಬರು ಯುವಕರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಶಿಂಧೋಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.

ಶಿಂಧೋಳಿ ಗ್ರಾಮದ ಬಸವರಾಜ (24. ವ) ಹಾಗೂ ಗಿರೀಶ (28. ವ) ಕೊಲೆಯಾದವರು.
ಶಿಂಧೋಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯ ಏರ್ಪಡಿಸಲಾಗಿತ್ತು. ಸಂಜೆ 7ರ ಸುಮಾರಿಗೆ ಯುವಕರು ಆಟವಾಡುತ್ತಿದ್ದರು.
ಇದೇ ವೇಳೆ ಹಾಲಿನ ಡೈರಿಯ ವಾಹನ ಓಡಿಸುವ ಚಾಲಕ ಇದೇ ಸ್ಥಳಕ್ಕೆ ಬಂದು ವಾಹನ ನಿಲ್ಲಿಸಿದ್ದರು ಎನ್ನಲಾಗಿದೆ. ಈ ವೇಳೆ ಕ್ರಿಕೆಟ್ ಆಡುವ ಇಬ್ಬರು ಯುವಕರು ಹಾಗೂ ವಾಹನ ಚಾಲಕನ ಮಧ್ಯೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಒಬ್ಬರಿಗೊಬ್ಬರು ಹೊಡೆದಾಡತೊಡಗಿದರು ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ವೇಳೆ ತನ್ನ ಬಳಿ ಇದ್ದ ಚಾಕು ತಂದ ಡೈರಿ ವಾಹನದ ಚಾಲಕ ಇಬ್ಬರೂ ಯುವಕರ ಮೇಲೆ ಹಲ್ಲೆ ಮಾಡಿ ಯದ್ವಾ ತದ್ವ ಚುಚ್ಚಿದ ಎನ್ನಲಾಗಿದೆ.
ತೀವ್ರ ರಕ್ತಸ್ರಾವದಿಂದ ಯುವಕರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆ ಮುಟ್ಟುವುದರಲ್ಲಿ ಇಬ್ಬರೂ ಕೊನೆಯುಸಿರೆಳೆದಿದ್ದರು.
ಬಳಿಕ ಬಿಗುವಿನ ವಾತಾವರಣ ನಿರ್ಮಾಣವಾಯಿತು.
ಹೆಚ್ಚಿವರಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.