ಮದುವೆ ನಿಶ್ಚಯವಾಗಿದ್ದ ಯುವತಿಯ ಬರ್ಭರ ಕೊಲೆ
ಮದುವೆ ನಿಶ್ಚಯವಾಗಿದ್ದ ಯುವತಿಯನ್ನು ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ದಾವಣಗೆರೆ ಪಿ.ಜೆ. ಬಡಾವಣೆಯಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ವಿನೋಬನಗರದ ಮಹಮ್ಮದ್ ಮುಸ್ತಫಾ ಎಂಬವರ ಮಗಳು ಚಾಂದ್ ಸುಲ್ತಾನ (28) ಕೊಲೆಯಾದವರು.
ಕಚೇರಿಯೊಂದರಲ್ಲಿ ಚಾಂದ್ ಸುಲ್ತಾನ ಕೆಲಸ ಮಾಡುತ್ತಿದ್ದರು. ಹರಿಹರದ ಅಯೂಬ್ ಎಂಬ ಯುವಕನ ಜತೆಗೆ ಮದುವೆ ನಿಶ್ಚಯವಾಗಿತ್ತು.
ಚಾಂದ್ ಸುಲ್ತಾನಾಳನ್ನು ಮದುವೆಯಾಗಬೇಕು ಎಂದು ಇನ್ನೊಬ್ಬ ಯುವಕ ಪ್ರಯತ್ನಿಸುತ್ತಿದ್ದ ಎನ್ನಲಾಗಿದ್ದು ಪೊಲೀಸರಿಗೆ ಆತನ ಮೇಲೆ ಅನುಮಾನ ಉಂಟಾಗಿ ತನಿಖೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.