ಕರಾವಳಿರಾಷ್ಟ್ರೀಯ

ಕೋಡಿಂಬಾಳದ ಅಬೂಬಕ್ಕರ್ ಹೃದಯಾಘಾತದಿಂದ ಮಕ್ಕಾದಲ್ಲಿ ನಿಧನ : ಪತ್ನಿ ಸಮೇತ ಉಮ್ರಾ ಯಾತ್ರೆಗೆ ತೆರಳಿದ್ದರು



ಕಡಬ: ತಾಲೂಕಿನ ಕೋಡಿಂಬಾಳ ನಿವಾಸಿ ಅಬೂಬಕ್ಕರ್ ಅವರು ಹೃದಯಾಘಾತದಿಂದ ಸೌದಿ ಅರೇಬಿಯಾದ ಮಕ್ಕಾದಲ್ಲಿ ನಿಧನರಾಗಿದ್ದಾರೆ.


ಪತ್ನಿ ಸಮೇತ ಉಮ್ರಾ ಯಾತ್ರೆಗೆ ತೆರಳಿದ್ದ ಅಬೂಬಕ್ಕರ್ ಅವರು ಉಮ್ರಾ ಪೂರೈಸಿದ ಬಳಿಕ ಪವಿತ್ರ ಮಕ್ಕಾದಲ್ಲಿ ನಿಧನರಾದರು.

ಮೃತದೇಹವು ಮಕ್ಕಾದ ಮುಸ್ತಫಾ ಮಲಿಕ್ ಫೈಸಲ್ ಆಸ್ಪತ್ರೆಯಲ್ಲಿದೆ. ಮೃತರ ಪಾರತ್ರಿಕ ವಿಜಯಕ್ಕಾಗಿ ಮತ್ತು ಕುಟುಂಬದ ಸಮಾಧಾನಕ್ಕಾಗಿ ಪ್ರಾರ್ಥಿಸಲು ಉಮ್ರಾ ಯಾತ್ರೆ ತಂಡದ ಮುಖ್ಯಸ್ಥ ಸಿರಾಜುದ್ದೀನ್ ಫೈಝಿ ಮಾಡನ್ನೂರು ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!