ಕರಾವಳಿ

ಪುತ್ತೂರು: ಕೆದಂಬಾಡಿಯಲ್ಲಿ ವಯರಿಂಗ್ ಮಾಡುತ್ತಿದ್ದ ವೇಳೆ ವಿದ್ಯುತ್ ಶಾಕ್-ಆಸ್ಪತ್ರೆಗೆ ದಾಖಲು



ಪುತ್ತೂರು: ಕೆದಂಬಾಡಿ  ಗ್ರಾಮದ ಕೆದಂಬಾಡಿ ಸ.ಹಿ.ಪ್ರಾ.ಶಾಲೆಯಲ್ಲಿ ವಿದ್ಯುತ್ ವಯರಿಂಗ್ ಮಾಡುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದು ಯುವಕನೋರ್ವ ತೀವ್ರ ಗಾಯಗೊಂಡ ಘಟನೆ ನಡೆದಿದೆ.

ಸಾಂದರ್ಭಿಕ ಚಿತ್ರ

 ಪರ್ಪುಂಜ ನಿವಾಸಿ ಜಗದೀಶ್‌ರವರು ಡಿ.20ರಂದು ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್‌ಗಾಗಿ ವಯರಿಂಗ್ ಮಾಡುತ್ತಿದ್ದರು. ಏಣಿಯ ಮೂಲಕ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದಿದ್ದು ಜಗದೀಶ್ ಏಣಿಯಿಂದ ಕೆಳಗಡೆ ಬಿದ್ದು ತಲೆಗೆ ತೀವ್ರ ಗಾಯವಾಗಿದೆ. 

ಕೂಡಲೇ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!