ದೇಶಕ್ಕೆ ಸುಸ್ಥಿರ ಅಭಿವೃದ್ಧಿ ಅಗತ್ಯವಿದೆಯೇ ಹೊರತು ಅಡ್ಡಹಾದಿಯ ರಾಜಕೀಯವಲ್ಲ- ಮೋದಿ
ನಾಗಪುರ: ದೇಶಕ್ಕೆ ಸುಸ್ಥಿರ ಅಭಿವೃದ್ಧಿ ಅಗತ್ಯವಿದೆಯೇ ಹೊರತು ಅಡ್ಡಹಾದಿಯ ರಾಜಕೀಯವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ರೂ 75 ಸಾವಿರ ಕೋಟಿ ಮೊತ್ತದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು
ಕೆಲವು ಪಕ್ಷಗಳು ದೇಶದ ಆರ್ಥಿಕತೆಯನ್ನು ನಾಶಮಾಡಲು ಯತ್ನಿಸುತ್ತಿವೆ,
ಅಭಿವೃದ್ಧಿಯ ಕಡೆಗೆ ನಾವು ಸಂಕುಚಿತವಾಗಿ ಮುನ್ನಡೆದರೆ ಸೀಮಿತ ಅವಕಾಶಗಳು ಮಾತ್ರವೇ ಒದಗಿ ಬರುತ್ತವೆ. ಕಳೆದ ಎಂಟು ವರ್ಷಗಳಲ್ಲಿ ಈ ಮನೋಭಾವವನ್ನು ಬದಲಾಯಿಸಿರುವ ನಾವು ಎಲ್ಲರ ನಂಬಿಕೆ, ಬೆಂಬಲ ಮತ್ತು ಪ್ರಯತ್ನಗಳ ಜೊತೆ ಮುಂದುವರಿದಿದ್ದೇವೆ’ ಎಂದರು.
‘ಸುಸ್ಥಿರ ಅಭಿವೃದ್ಧಿಯ ಕಡೆಗೆ ಗಮನಹರಿಸಲು ಎಲ್ಲಾ ರಾಜಕಾರಣಿಗಳಲ್ಲಿ ಮನವಿ ಮಾಡುತ್ತೇನೆ. ಇದರಿಂದ ಚುನಾವಣೆಗಳಲ್ಲಿ ಗೆಲ್ಲಬಹುದು’ ಎಂದೂ ಮೋದಿ ಹೇಳಿದರು.