25 ಮಂದಿ ಹಿಂದೂ ಕಾರ್ಯಕರ್ತರಿಗೆ ಬಿಜೆಪಿ ಟಿಕೆಟ್ ಕೊಡಬೇಕು- ಮುತಾಲಿಕ್
ಹಿಂದುತ್ವವನ್ನು ಉಳಿಸಲು ಹಾಗೂ ಅವರ ರಕ್ಷಣೆಗೆ 25 ಜನ ಹಿಂದೂ ಕಾರ್ಯಕರ್ತರಿಗೆ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ಕೊಡಬೇಕು ಎನ್ನುವ ಬೇಡಿಕೆಯನ್ನು ಈಗಾಗಲೇ ಬಿಜೆಪಿಗೆ ತಿಳಿಸಿದ್ದೇವೆ. ಒಂದು ವೇಳೆ ಟಿಕೆಟ್ ಕೊಡದಿದ್ದರೆ ನಮ್ಮ ಸಂಘಟನೆಯಿಂದಲೇ 25 ಜನರನ್ನು ಕಣಕ್ಕೆ ಇಳಿಸಲಾಗುವುದು. ಜೊತೆಗೆ ನಾನೂ ಸ್ಪರ್ಧಿಸುತ್ತೇನೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.

‘ರಾಜ್ಯದಲ್ಲಿ ರೌಡಿಶೀಟರ್‌ಗಳನ್ನು ಬಿಜೆಪಿಗೆ ಸೇರಿಸಿಕೊಳ್ಳಲಾಗುತ್ತಿದೆ. ಇದು ಪಕ್ಷಕ್ಕೆ ಶೋಭೆಯಲ್ಲ. ಬಿಜೆಪಿ ಕೂಡ ತುಷ್ಠೀಕರಣದ ರಾಜಕಾರಣ ಮಾಡುತ್ತ ಕಾಂಗ್ರೆಸ್ ಹಾದಿಯಲ್ಲಿ ಸಾಗುತ್ತಿದೆ ಎಂದ ಅವರು ಬಿಜೆಪಿ ಇರುವುದೇ ಹಿಂದೂಗಳ ರಕ್ಷಣೆಗಾಗಿ’ ಎಂದರು.