ಅರಂತೋಡು: ರಸ್ತೆಗೆ ಮರ ಬಿದ್ದು ಎರಡು ಗಂಟೆ ಸಂಚಾರಕ್ಕೆ ಅಡಚಣೆ
ಸುಳ್ಯ: ಅರಂತೋಡು ಗ್ರಾಮದ ಎಲ್ಪಕಜೆ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ಮರ ಬಿದ್ದು ಸುಮಾರು 2 ಗಂಟೆ ತನಕ ಸಂಚಾರಕ್ಕೆ ಅಡಚಣೆಯಾದ ಘಟನೆ ವರದಿಯಾಗಿದೆ.
ಸುಮಾರು ಮೂರು ಗಂಟೆ ಹೊತ್ತಿಗೆ ಮರ ಬಿದ್ದಿದ್ದು ಸಮೀಪವಿರುವ ಜನಾರ್ಧನ ಮನೆಯವರು ಮರ ಬೀಳುವ ಶಬ್ದದಿಂದ ಎಚ್ಚರಗೊಂಡರು ವಿನಯ್ ಅವರು ಅರಂತೋಡಿನ ತಾಜುದ್ದೀನ್ ಅರಂತೋಡು ಅವರಿಗೆ ಫೋನ್ ಮಾಡಿ ತಿಳಿಸಿದರು. ಅವರು ಘಟನಾ ಸ್ಥಳಕ್ಕೆ ಆಗಮಿಸಿ ಪ್ರಕೃತಿ ವಿಕೋಪ ಸಹಾಯವಾಣಿಗೆ ಕರೆ ಮಾಡಿದರು. ತದನಂತರ ಅರಂತೋಡಿನ ಸೋಮಶೇಖರ ಪೈಕ ಅವರ ಕ್ರೈನ್ ತಂದು ಮರವನ್ನು ಬದಿಗೆ ಸರಿಸಲಾಯಿತು. ಅದರ ಮುಂಚಿತವಾಗಿ ವಾಹನ ಚಾಲಕರು ಹಗ್ಗವನ್ನು ಮರಕ್ಕೆ ಕಟ್ಟಿ ಪಿಕಪ್ ವಾಹನದ ಮೂಲಕ ಮರವನ್ನು ಬದಿಗೆ ಸರಿಸಲು ಪ್ರಯತ್ನಿಸಿದರು. ರಸ್ತೆ ಉದ್ದಕ್ಕೂ ಎರಡು ಬದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿತು. ಮಳೆಯು ವಿಪರೀತವಾಗಿ ಸುರಿಯುತ್ತಿದ್ದರು ಮರವನ್ನು ಬದಿಗೆ ಸರಿಸಲು ಪ್ರಯತ್ನ ಮಾಡಲಾಯಿತು. ಕ್ರೈನ್ ಬಂದ ಮೇಲೆ ಮರವನ್ನು ತೆರೆವುಗೊಳಿಸಿ ಸುಗಮ ಸಂಚಾರ ಮಾಡಲಾಯಿತು.
ಈ ಸಂದರ್ಭದಲ್ಲಿ ಲಾರಿಯೊಂದು ಬಂದು ರಸ್ತೆಯ ಬದಿಗೆ ಸರಿದು ನಿಂತಿದ್ದು ಲಾರಿಯ ಚಕ್ರ ಮಣ್ಣಿನಲ್ಲಿ ಹೂತು ಹೋಗಿದ್ದು ಮುಂದೆ ಬರದೆ ಬಾಕಿಯಾದ ಘಟನೆಯಾಗಿದೆ. ವಿನಯ್ ಎಲ್ಪಕಜೆ , ಸೋಮಶೇಖರ ಪೈಕ, ಶಿವಪ್ರಸಾದ್ ಎಲ್ಪಕಜೆ, ದೀಪಕ್ ಪೈಕ ,ತಾಜುದ್ದೀನ್ ಅರಂತೋಡು ಹಾಗೂ ವಾಹನ ಚಾಲಕರು ಸಹಕರಿಸಿದರು.