ಮಂಗಳೂರು: ಪತ್ನಿಯನ್ನು ಕೊಂದ ಪತಿ: ಆರೋಪಿ ಅರೆಸ್ಟ್
ಬಜ್ಪೆ: ಮಹಿಳೆಯೊಬ್ಬಳನ್ನು ಆಕೆಯ ಗಂಡ ಕೊಲೆ ಮಾಡಿದ ಘಟನೆ ಬಜ್ಪೆ ಪೋಲಿಸ್ ಠಾಣಾ ವ್ಯಾಪ್ತಿಯ ತೆಂಕಯೆಕ್ಕಾರು ದುರ್ಗಾನಗರ ಬಳಿ ರವಿವಾರ (ನ.27 ರಂದು) ರಾತ್ರಿ ನಡೆದಿದೆ.
ಸರಿತಾ (35) ಕೊಲೆಯಾದ ಮಹಿಳೆ. ಆಕೆಯ ಗಂಡ ದುರ್ಗೇಶ ಕೊಲೆ ಮಾಡಿದಾತ. ಈತನನ್ನು ಬಜ್ಪೆ ಪೋಲಿಸರು ಬಂಧಿಸಿದ್ದಾರೆ.
ನ. 27 ರಂದು ರಾತ್ರಿ ಗಂಡ-ಹೆಂಡತಿ ಮಧ್ಯೆ ಜಗಳವಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ದುರ್ಗೇಶ ಪತ್ನಿ ಸರಿತಾಳ ಮೇಲೆ ರೀಪಿನಿಂದ ಹಲ್ಲೆ ಮಾಡಿದ್ದಾನೆ. ಹಲ್ಲೆಯ ಪರಿಣಾಮ ತೀವ್ರ ರಕ್ತಸ್ರಾವವಾಗಿ ಸರಿತಾ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಈ ಕೃತ್ಯ ನಡೆದ ಸಂದರ್ಭ ದಂಪತಿಯ ಹನ್ನೊಂದು ವರ್ಷದ ಮಗ ಹೆದರಿ ಓಡಿ ಹೋಗಿದ್ದಾನೆ ಎನ್ನಲಾಗಿದೆ.
ದಂಪತಿಯ ನಡುವೆ ಯಾವ ಕಾರಣಕ್ಕೆ ಜಗಳವಾಗಿದೆ ಎನ್ನುವುದು ತನಿಖೆಯ ಬಳಿಕವಷ್ಟೇ ತಿಳಿದು ಬರಬೇಕಿದೆ.
ಬಜ್ಪೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.