Uncategorized

ಆಟವಾಡುವ ವೇಳೆ ಬೊಗಳಿತು ಎನ್ನುವ ಕಾರಣಕ್ಕೆ ಗರ್ಭಿಣಿ ನಾಯಿಯನ್ನು ಅಮಾನವೀಯವಾಗಿ ಥಳಿಸಿ ಕೊಂದ ವಿದ್ಯಾರ್ಥಿಗಳು: ನಾಲ್ಕು ಮಂದಿ ಬಂಧನ



ಬೊಗಳಿತು ಎನ್ನುವ ಕಾರಣಕ್ಕೆ ಗರ್ಭಿಣಿ ನಾಯಿಯನ್ನು ಅಮಾನವೀಯವಾಗಿ ಥಳಿಸಿ ಕೊಂದ ನಾಲ್ಕು ಮಂದಿ ವಿದ್ಯಾರ್ಥಿಗಳನ್ನು ದೆಹಲಿ ‍ಪೊಲೀಸರು ಬಂಧಿಸಿದ್ದಾರೆ.

ಗುಂಪೊಂದು ಗರ್ಭಿಣಿ ಶ್ವಾನವನ್ನು ಥಳಿಸುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಈ ಕ್ರೌರ್ಯಕ್ಕೆ ಭಾರೀ ಖಂಡನೆಯೂ ವ್ಯಕ್ತವಾಗಿತ್ತು.

ಬೇಸ್‌ಬಾಲ್‌ ಬ್ಯಾಟ್‌, ಕೋಲು ಹಾಗೂ ಕಬ್ಬಿಣದ ರಾಡ್‌ಗಳಿಂದ ಶ್ವಾನವನ್ನು ಥಳಿಸಿ, ಗಹಗಹಿಸಿ ನಗುವ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿತ್ತು.

ಅಲ್ಲದೇ ಶ್ವಾನದ ಕಾಲಿನಲ್ಲಿ ಹಿಡಿದು, ಮೈದಾನದ ತುಂಬಾ ಎಳೆದುಕೊಂಡು ಹೋಗುವ ದೃಶ್ಯಗಳೂ ವಿಡಿಯೊಲ್ಲಿ ದಾಖಲಾಗಿತ್ತು.

ದೆಹಲಿಯ ನ್ಯೂ ಫ್ರೆಂಡ್ಸ್‌ ಕಾಲೊನಿಯಲ್ಲಿ ಈ ಘಟನೆ ನಡೆದಿದ್ದು, ಆಟವಾಡುವ ವೇಳೆ ನಾಯಿ ಬೊಗಳಿದ್ದಕ್ಕೆ ಥಳಿಸಿದೆವು ಎಂದು ಬಂಧಿತ ಆರೋಪಿಗಳು ವಿಚಾರಣೆ ವೇಳೆ ಹೇಳಿದ್ದಾರೆ.

ಬಂಧಿತ ನಾಲ್ಕು ಮಂದಿಯೂ ಓಖ್ಲಾದ, ಡಾನ್‌ ಬಾಸ್ಕೋ ತಾಂತ್ರಿಕ ಸಂಸ್ಥೆಯ ವಿದ್ಯಾರ್ಥಿಗಳು ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!