ಕೇರಳದಿಂದ ತಪ್ಪಿಸಿಕೊಂಡಿದ್ದ ಆರೋಪಿಯನ್ನು ಕಡಬದಲ್ಲಿ ಬಂಧಿಸಿದ ಪೊಲೀಸರು
ಕಡಬ: ಪ್ರಕರಣವೊಂದರಲ್ಲಿ ಕೇರಳದ ತಿರುವನಂತಪುರಂನಿಂದ ತಪ್ಪಿಸಿಕೊ೦ಡಿದ್ದ ಆರೋಪಿಯನ್ನು ಕೇರಳ ಪೊಲೀಸರು ಕಡಬಕ್ಕೆ ಬ೦ದು ಬ೦ಧಿಸಿದ ಘಟನೆ ನಡೆದಿದೆ.

ಬಿನು ಎಂಬಾತನ ವಿರುದ್ಧ ಕೇರಳದಲ್ಲಿ ಮಚ್ಚಿನಿಂದ ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿತ್ತು. ಆರೋಪಿ ಕೇರಳದಿಂದ ತಪ್ಪಿಸಿಕೊಂಡು ಬಂದು ಕಡಬ ಸಮೀಪದ ನೀರಾಜೆ ಎಂಬಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುತ್ತಾ ಇಲ್ಲಿನ ರೂಮ್ ಒಂದರಲ್ಲಿ ವಾಸವಿದ್ದ. ಸೂಕ್ತ ಮಾಹಿತಿಯೊಂದಿಗೆ ಕಡಬಕ್ಕೆ ಕೇರಳದ ತಿರುವನಂತಪುರಂ ಜಿಲ್ಲೆಯ ವೆಂಜಾರಂಮೂಡ್ ನಿಂದ ಬಂದ ಸಿಪಿಐ ಅನೂಪ್ ಸತ್ಯನ್ ಹಾಗೂ ಇಬ್ಬರು ಪೊಲೀಸರ ತಂಡ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಬಿನು ಕಳೆದ ಕೆಲವು ತಿಂಗಳುಗಳಿಂದ ಚರ್ಚ್ ಒಂದಕ್ಕೆ ಸಂಬಂಧಿಸಿದ ರಬ್ಬರ್ ತೋಟ ಹಾಗೂ ಸ್ಥಳೀಯ ವ್ಯಕ್ತಿಯೊಬ್ಬರ ರಬ್ಬರ್ ತೋಟದಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿವೆ, ಹೊರ ರಾಜ್ಯಗಳಿಂದ ಕೆಲಸ ಹುಡುಕಿಕೊಂಡು ಜಿಲ್ಲೆಯ ವಿವಿಧ ಭಾಗಗಳಿಗೆ ಬರುವವರ ಬಗ್ಗೆ ಎಚ್ಚರ ವಹಿಸುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.