ಶಾಫಿ ಬೆಳ್ಳಾರೆ, ಇಕ್ಬಾಲ್ ಬೆಳ್ಳಾರೆ ಅಡಗಿ ಕೊತವರಲ್ಲ: ರಿಯಾಝ್ ಕಡಂಬು: ಮಂಗಳೂರಿನಲ್ಲಿ ಎಸ್.ಡಿ.ಪಿ.ಐ ಸುದ್ದಿಗೋಷ್ಠಿ
ಮಂಗಳೂರು: ಎನ್.ಐ.ಎ ಬೆಳ್ಳಾರೆಯ ಶಾಫಿ ಬೆಳ್ಳಾರೆ , ಇಕ್ಬಾಲ್ ಬೆಳ್ಳಾರೆ ಯನ್ನು ಯಾಕೆ ಬಂಧಿಸಿದ್ದಾರೆ ಎಂಬುವುದು ತಿಳಿದಿಲ್ಲ. ಇವರು ಎಲ್ಲಿಯೂ ಅಡಗಿಕೂತವರಲ್ಲ. ಇವರು ಸಭೆ ಕಾರ್ಯಕ್ರಮ , ಜನಸೇವೆಗಾಗಿ ಲಭ್ಯವಿದ್ದವರು ಎಂದು ಎಸ್.ಡಿ.ಪಿ. ಐ ರಾಜ್ಯ ಮುಖಂಡ ರಿಯಾಝ್ ಕಡಂಬು ಹೇಳಿದರು.

ಅವರು ಇಂದು ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು.
ಇದು ಪೊಲೀಸರ ದಬ್ಬಾಳಿಕೆಯಾಗುತ್ತಿದೆ. ಶಾಸಕರ ಭವನ, ಗ್ರಾ.ಪಂಗಳಿಗೂ ಮುತ್ತಿಗೆ ಹಾಕುತ್ತೇವೆ ಏಕೆಂದರೆ ನಾವು ಜನ ಪರ ಸೇವೆ ಮಾಡುವವರು ಅವರಿಗೆ ಎಲ್ಲಾ ಸೇವೆ ಒದಗಿಸುವ ಕಾರ್ಯ ಮಾಡುತ್ತೆವೆ. ಇದುವರೆಗೂ ೧೫ಕ್ಕೂ ಮಿಕ್ಕ ಸೇವಾ ಕೇಂದ್ರಗಳನ್ನು ಪೊಲೀಸರು ಮುಚ್ಚಿಸಿದ್ದಾರೆ. ಪ್ರತಿ ನಗರಗಳಲ್ಲಿ ಪ್ರತಿಭಟನೆ ಮಾಡುತ್ತೇವೆ.
ನಾಯಕರನ್ನು ಬಂಧಿಸುವುದನ್ನು ಪೊಲೀಸರು ನಿಲ್ಲಿಸಬೇಕು. ಟೋಲ್ ಗೇಟ್ ಹೋರಾಟಗಾರ ಮನೆಗೂ ನುಗ್ಗುತ್ತಾರೆ
ಪೊಲೀಸ್ ಅಧಿಕಾರಿಗಳು ಜನರ ಹಕ್ಕನ್ನು ಕಸಿದುಕೊಳ್ಳುವ ಕೆಲಸ ಮಾಡಬೇಡಿ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ, ಜಿಲ್ಲಾ ಮುಖಂಡರು ಉಪಸ್ಥಿತರಿದ್ದರು.