ಕಾರಿನ ಗ್ಲಾಸ್ ಒಡೆದು ಐದು ಲಕ್ಷ ರೂ. ಕಳ್ಳತನ:
ಕಾರು ಚಾಲಕರೇ ಹುಷಾರ್
ಶಿಕಾರಿಪುರ: ಪಟ್ಟಣದ ಡಿಸಿಸಿ ಬ್ಯಾಂಕ್ ಮುಂಭಾಗ ನಿಲ್ಲಿಸಿದ ಕಾರಿನ ಗ್ಲಾಸ್ ಒಡೆದು ಕಾರಿನ ಸೀಟಿನ ಮೇಲೆ ಇಟ್ಟಿದ್ದ ಐದು ಲಕ್ಷ ರೂ. ಹಣವನ್ನು ಕಳ್ಳರು ಕಳ್ಳತನ ಮಾಡಿದ ಘಟನೆ ಶನಿವಾರ ನಡೆದಿದೆ.
ಕಪ್ಪನಹಳ್ಳಿ ಗ್ರಾಮದ ನಿವಾಸಿ ಕೇಶವ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಿಂದ ಐದು ಲಕ್ಷ ಹಣ ಬಿಡಿಸಿಕೊಂಡು ಬಂದಿದ್ದರು. ಈ ಹಣವನ್ನು ತಮ್ಮ ಕಾರಿನ ಸೀಟಿನಲ್ಲಿ ಇಟ್ಟು ಡಿಸಿಸಿ ಬ್ಯಾಂಕ್ ಒಳಗೆ ಹೋದ ಸಂದರ್ಭದಲ್ಲಿ ಕಳ್ಳರು ಕಾರಿನ ಗ್ಲಾಸ್ ಒಡೆದು ಹಣ ಲಪಟಾಯಿಸಿದ್ದಾರೆ.
ಸ್ಥಳಕ್ಕೆ ಡಿವೈಎಸ್ ಪಿ ಶಿವಾನಂದ ಮದರಖಂಡಿ, ಸಿಪಿಐ ಲಕ್ಷ್ಮಣ್, ಪಟ್ಟಣ ಪೊಲೀಸ್ ಠಾಣೆ ಪಿಎಸ್ ಐ ಪ್ರಶಾಂತ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳ್ಳತನ ಪ್ರಕರಣ ಸಂಬಂಧಿಸಿದಂತೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.