ರಾಷ್ಟ್ರೀಯ

ಗುಜರಾತ್: ತೂಗು ಸೇತುವೆ ಕುಸಿತ- ಈ ವರೆಗೆ 35 ಮಂದಿ ಮೃತ್ಯು



ಮೋರ್ಬಿ (ಗುಜರಾತ್‌):  ಮೊರ್ಬಿ ಎಂಬಲ್ಲಿ ಮಚ್ಚು ನದಿಗೆ ನಿರ್ಮಿಸಲಾಗಿದ್ದ ತೂಗು ಸೇತುವೆ ಕುಸಿತದಲ್ಲಿ ಈ ವರೆಗೆ 35 ಮಂದಿ ಮೃತಪಟ್ಟಿದ್ದಾರೆ ಎಂದು ಗುಜರಾತ್‌ ಸಚಿವ ಬ್ರಿಜೇಶ್‌ ಮೆರ್ಜಾ ತಿಳಿಸಿದ್ದಾರೆ.

ನೂರಾರು ಮಂದಿ ನೀರು ಪಾಲಾಗಿದ್ದು ಅವರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸಂತಾಪ ಸೂಚಿಸಿದ್ದಾರೆ. ರಾಜ್ಯ ಸರ್ಕಾರವು ಮೃತರ ಕುಟುಂಬಕ್ಕೆ ₹4 ಲಕ್ಷ ಮತ್ತು ಗಾಯಗೊಂಡವರಿಗೆ ₹50,000 ನೀಡಲಿದೆ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!