ತಾಯಿಗೆ ನೆರವು ಆಗಲು ರೋಬೋಟ್ ತಯಾರಿಸಿದ ಪಿಯು ವಿದ್ಯಾರ್ಥಿ ಮುಹಮ್ಮದ್ ಶಿಯಾದ್
ಕೇರಳ: ಪಿಯುಸಿ ವಿದ್ಯಾರ್ಥಿಯೋರ್ವ ರೋಬೋಟ್ ಅನ್ನು ತಯಾರಿಸಿ ಸುದ್ದಿಯಾಗಿದ್ದು, ಇದೀಗ ಆ ರೋಬೋಟ್ ತಾಯಿಯ ಮನೆ ಕೆಲಸಗಳಲ್ಲಿ ಸಹಾಯ ಮಾಡುತ್ತಿದೆ ಎಂದು ಹೇಳಿದ್ದಾನೆ.
ಮುಹಮ್ಮದ್ ಶಿಯಾದ್ ಕಣ್ಣೂರು ಜಿಲ್ಲೆಯ ಕೂತುಪರಂಬ ನಿವಾಸಿಯಾಗಿದ್ದು, ದ್ವಿತೀಯ ಪಿಯುಸಿ ಕಂಪ್ಯೂಟರ್ ಸೈನ್ಸ್ ಓದುತ್ತಿದ್ದಾನೆ. ಈತ ಕಾಲೇಜಿನ ಯೋಜನೆಯ ಭಾಗವಾಗಿ ರೋಬೋಟನ್ನು ತಯಾರಿಸಿದ್ದಾನೆ.
ಶಿಯಾದ್ MIT ಅಪ್ಲಿಕೇಶನ್, ಆಂಡ್ರಾಯ್ಡ್, ಅಡ್ಮೆಗಾ ನಿಯಂತ್ರಕ, ಪ್ಲಾಸ್ಟಿಕ್ ಸ್ಟೂಲ್, ಅಲ್ಯೂಮಿನಿಯಂ ಶೀಟ್, ಫೀಮೇಲ್ ಡಮ್ಮಿ, ಸರ್ವಿಂಗ್ ಪ್ಲೇಟ್ ಮುಂತಾದ ವಸ್ತುಗಳಿಂದ ರೋಬೋಟ್ ತಯಾರಿಸಿದ್ದಾನೆ.ಇದಕ್ಕೆ 10,000 ವೆಚ್ಚವಾಗಿದೆ.ಈ ರೋಬೋಟ್ ಐದರಿಂದ ಆರು ಕೆಜಿ ತೂಕವನ್ನು ಎತ್ತಿಕೊಂಡು ಹೋಗುವ ಸಾಮರ್ಥ್ಯವನ್ನು ಕೂಡ ಹೊಂದಿದೆ.