ನಮ್ಮ ಶತ್ರುಗಳ ವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳುತ್ತೇವೆ: ನರೇಂದ್ರ ಮೋದಿ: ಕಾರ್ಗಿಲ್ ನಲ್ಲಿ ಯೋಧರ ಜೊತೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ
ಕಾರ್ಗಿಲ್: ಶಕ್ತಿಯಿಲ್ಲದೆ ಶಾಂತಿಯನ್ನು ಪಡೆಯುವುದು ಅಸಾಧ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದರು. ಕಾರ್ಗಿಲ್ ನಲ್ಲಿ ಯೋಧರ ಜೊತೆ ದೀಪಾವಳಿ ಆಚರಿಸುತ್ತಿರುವ ನರೇಂದ್ರ ಮೋದಿ ಅವರು, ನಮ್ಮ ಸರ್ಕಾರವು ಯುದ್ದವನ್ನು ಕೊನೆಯ ಆಯ್ಕೆಯಾಗಿರಿಸಿದೆ ಎಂದಿದ್ದಾರೆ.
“ಭಾರತವು ಈಗ ಜಾಗತಿಕವಾಗಿ ಗೌರವ ಪಡೆಯುತ್ತಿದೆ. ನಮ್ಮ ಗಡಿಗಳನ್ನು ರಕ್ಷಿಸುತ್ತಿರುವ ನಾವು ನಮ್ಮ ಶತ್ರುಗಳ ವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳುತ್ತೇವೆ. ನಮಗೆ ಸವಾಲು ಎದುರಾದರೆ ಶತ್ರುಗಳಿಗೆ ಅವರದೇ ಭಾಷೆಯಲ್ಲಿ ಹೇಗೆ ತಕ್ಕ ಪ್ರತ್ಯುತ್ತರ ನೀಡಬೇಕೆಂದು ನಮ್ಮ ಸಶಸ್ತ್ರ ಪಡೆಗಳು ತಿಳಿದಿದೆ” ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು 2014ರಿಂದ ಪ್ರತಿ ಬಾರಿ ದೀಪಾವಳಿಯನ್ನು ಯೋಧರ ಜೊತೆಗೆ ಆಚರಿಸುತ್ತಾರೆ. ಈ ಬಾರಿ ಕಾರ್ಗಿಲ್ ನಲ್ಲಿ ಅವರು ದೀಪಾವಳಿ ಆಚರಣೆ ಮಾಡುತ್ತಿದ್ದಾರೆ.
ಗಡಿ ಭಾಗಗಳು ಸುರಕ್ಷಿತವಾಗಿದ್ದಾಗ ಮತ್ತು ಆರ್ಥಿಕತೆ ಉತ್ತಮವಾಗಿದ್ದಾಗ ದೇಶವು ಸುಭದ್ರವಾಗಿರುತ್ತದೆ. ಕಳೆದ ಏಳೆಂಟು ವರ್ಷಗಳಿಂದ ಭಾರತದ ಆರ್ಥಿಕತೆಯು ಹತ್ತನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಬಂದಿದೆ ಎಂದು ಪಿಎಂ ಮೋದಿ ಹೇಳಿದರು.