ಅಮ್ಚಿನಡ್ಕ: ಮಂಗಳೂರಿನ ವೈದ್ಯರೋರ್ವರ ಕಾರು ಪಲ್ಟಿ
ಪುತ್ತೂರು: ಮಾಣಿ- ಮೈಸೂರು ರಾ. ಹೆದ್ದಾರಿ 275 ರ ಕಾವು ಸಮೀಪದ ಅಮ್ಚಿನಡ್ಕ, ಮಳಿ ಎಂಬಲ್ಲಿ ಕಾರು ಪಲ್ಟಿಯಾಗಿ ಕಾರಿನಲ್ಲಿದ್ದವರು ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪಾರಾದ ಘಟನೆ ಅ.20ರಂದು ಸಂಜೆ ನಡೆದಿದೆ.
ಆಂದ್ರಪ್ರದೇಶದ ವಿಶಾಖಪಟ್ಟಣ ನಿವಾಸಿ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ವೈದ್ಯರು ಮತ್ತು ಇತರರು ಮಡಿಕೇರಿ ಕಡೆಯಿಂದ ಮಂಗಳೂರುಗೆ ತೆರಳುವ ವೇಳೇ ಅಮ್ಚಿನಡ್ಕ ಮಳಿ ಎಂಬಲ್ಲಿ ಕಾರ್ ಸ್ಕಿಡ್ ಆಗಿ ರಸ್ತೆ ಬದಿಯ ತಡೆ ಬೇಲಿಗೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ.
ಕಾರಿನಲ್ಲಿದ್ದ ವೈದ್ಯ ಮತ್ತು ಮಹಿಳೆಯರು ಅಲ್ಪ ಸ್ವಲ್ಪ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.