ಕೊಡಗು ಏಕೀಕರಣ ರಂಗದಿಂದ ತಲಕಾವೇರಿಯಲ್ಲಿ 27 ನೇ ವರ್ಷದ 1 ತಿಂಗಳ ಅನ್ನ ಸಂತರ್ಪಣೆ
ತಲಕಾವೇರಿ: ತುಲಾ ಸಂಕ್ರಮಣದ ತೀರ್ಥೋದ್ಭವ ಮತ್ತು ಕಾವೇರಿ ಜಾತ್ರೆಯ ಪ್ರಯುಕ್ತ ಅಕ್ಟೋಬರ್ 17ರ ಬೆಳ್ಳಿಗೆಯಿಂದ ನವೆಂಬರ್ 16ನೇ ತಾರೀಕಿನವರೆಗೆ ಸತತವಾಗಿ ಮೂರು ಹೊತ್ತಿನ ಅನ್ನದಾನ ಕಾರ್ಯಕ್ರಮವನ್ನು ಕೊಡಗು ಏಕೀಕರಣ ರಂಗವು ದಾನಿಗಳ ಮೂಲಕ ನಡೆಸುತ್ತಿದೆ.
ಕೊಡಗು ಏಕೀಕರಣ ರಂಗವು ಕೊಡಗಿನ ಸಮಾನ ಮನಸ್ಕರು ಹುಟ್ಟುಹಾಕಿದ ಸಂಸ್ಥೆಯಾಗಿದ್ದು ಹಲವಾರು ಜನರ ಜೀವನಕ್ಕೆ ದಾರಿದೀಪವಾಗಿರುವುದನ್ನು ಇಲ್ಲಿ ಸ್ಮರಿಸಬಹುದು.
ಕೊಡಗು ಏಕೀಕರಣ ರಂಗದ ಅನ್ನ ಸಂತರ್ಪಣೆಯು ತಲಕಾವೇರಿಯ ಅನ್ನ ಛತ್ರದಲ್ಲಿ ಸಾವಿರಾರು ಜನ ಭಕ್ತಾದಿಗಳಿಗೆ ಒಂದು ತಿಂಗಳ ಕಾಲ ಮೂರು ಹೊತ್ತಿನ ತಿಂಡಿ ಊಟ ಕಾಫಿ ಇತ್ಯಾದಿಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿ 26 ವರ್ಷಗಳಿಂದ,ಕ್ಷೇತ್ರಕ್ಕೆ ಬರುವ ಸಾವಿರಾರು ಭಕ್ತರ ಹೊಟ್ಟೆ ತುಂಬಿಸುತ್ತಿದೆ.
ಅನ್ನ ಸಂತರ್ಪಣೆ ಯಾವುದೇ ಗೊಂದಲಗಳಿಲ್ಲದೆ ಸಹಸ್ರಾರು ಸಂಖ್ಯೆಯ ಭಕ್ತರು ಬಂದರೂ ಅವರ ಹಸಿವನ್ನು ನೀಗಿಸುವಲ್ಲಿ, ಕ್ಷೇತ್ರದ ಪರಿಸರದ, ಅನ್ನಛತ್ರದ ಶುಚಿತ್ವವನ್ನು ಕಾಪಾಡುವಲ್ಲಿ ಯಶಸ್ವಿಯಾಗಿದೆ.
ಭಕ್ತರಿಗೂ ಆರೋಗ್ಯಕರ ಬಿಸಿಬಿಸಿ ಭೋಜನವನ್ನು ಉಣಬಡಿಸುತ್ತಾರೆ.
ಈ ಅನ್ನದಾನ ಕಾರ್ಯಕ್ರಮದಲ್ಲಿ ಕ್ಷೇತ್ರಕ್ಕೆ ನಿಯೋಜನೆ ಗೊಂಡ ನೂರಾರು ಆರಕ್ಷಕ ಸಿಬ್ಬಂದಿಗಳು, ಕ್ಷೇತ್ರದ ಸಿಬ್ಬಂದಿಗಳು ಇತರ ಕೆಲಸದ ಸಿಬ್ಬಂದಿಗಳಿಗೆ ನಿತ್ಯ ಉಪಯೋಗವಾಗುತ್ತಿರುವುದು ವಿಶೇಷವಾಗಿದೆ.
ಅನ್ನದಾನದ ಯಶಸ್ವಿನ ಹಿಂದೆ ಮುಖ್ಯವಾಗಿ ಮಡಿಕೇರಿಯ ಉದ್ಯಮಿ ತಮ್ಮು ಪೂವಯ್ಯ, ತೇಲಪಂಡ ಪ್ರಮೋದ್ ಸೋಮಯ್ಯ, ಮಂದಪಂಡ ಸತೀಶ್ ಅಪ್ಪಚ್ಚು, ಬಿದ್ದಾಟಂಡ ತಮ್ಮಯ್ಯ, ಮತ್ತು ಕೆಲವು ದಾನಿಗಳ ಸಹಾಯದಿಂದ ಒಂದು ತಿಂಗಳ ಕಾಲ ಪರಿಶ್ರಮ ಪಡುತಿದೆ. ಇವರೊಂದಿಗೆ ಕಾರ್ಯಕರ್ತರ ಬಳಗ ಕೂಡ ಅವಿರತ ಶ್ರಮಿಸುತ್ತಿದೆ.