ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ
ಮಂಗಳೂರು: ಆಟೋ ರಿಕ್ಷಾ ಪ್ರಯಾಣದ ಬಳಿಕ ರಿಕ್ಷಾದಲ್ಲೇ ಮಹಿಳೆಯೋರ್ವರು ಬಿಟ್ಟು ಹೋದ ಚಿನ್ನವನ್ನು ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದ ಘಟನೆ ವರದಿಯಾಗಿದೆ.

ಅಫ್ಜಿಲಾ ಎಂಬುವವರು ಸುಲ್ತಾನ್ ಗೋಲ್ಡ್ ಮಳಿಗೆಯಿಂದ 48 ಗ್ರಾಮ್ ಚಿನ್ನದ ನೆಕ್ಲೇಸ್ ಸರವನ್ನು ಖರೀದಿಸಿ ರಿಕ್ಷಾದಲ್ಲಿ ಪ್ರಯಾಣಿಸುವಾಗ ಸರವಿದ್ದ ಬ್ಯಾಗನ್ನು ಮರೆತು ರಿಕ್ಷಾದಲ್ಲಿ ಬಿಟ್ಟುಹೋಗಿದ್ದರು. ಇದನ್ನು ಗಮನಿಸಿದ ರಿಕ್ಷಾ ಚಾಲಕ ಬಸವರಾಜ ಎಂಬವರು ಬ್ಯಾಗನಲ್ಲಿದ್ದ ಚಿನ್ನದ ನೆಕ್ಲೇಸ್ ಸರವನ್ನು ವಾಪಸ್ ವಾರಸುದಾರಾರಿಗೆ ನೀಡಿ ಪ್ರಾಮಾಣಿಕತೆ ಮೆರೆದು ಪ್ರಶಂಸೆಗೆ ಪಾತ್ರವಾಗಿದ್ದಾರೆ.

