ವಿದ್ಯುತ್ ಆಘಾತ: ಕರ್ತವ್ಯ ನಿರತ ಮೆಸ್ಕಾಂ ಪವರ್ ಮ್ಯಾನ್ ರವಿಚಂದ್ರ ಮೃತ್ಯು, ಶಾಸಕರ ಭೇಟಿ, ಸಾಂತ್ವನ
ಪುತ್ತೂರು:ಮೆಸ್ಕಾಂ ಪವರ್ ಮ್ಯಾನ್ ಕೆದಿಲ
ಶಾಲಾ ಬಳಿ ವಿದ್ಯುತ್ ದುರಸ್ತಿ ಕಾರ್ಯ ನಡೆಸುತ್ತಿದ್ದ ವೇಳೆ ವಿದ್ಯುತ್ ಆಘಾತಕ್ಕೆ ಬಲಿಯಾದ ದಾರುಣ ಘಟನೆ ಅ.3ರಂದು ನಡೆದಿದೆ.ಕೆಮ್ಮಾಯಿ ನಿವಾಸಿಯಾಗಿದ್ದು, ಮೆಸ್ಕಾಂ ವಿಟ್ಲ ಉಪಕೇಂದ್ರದ ಪವರ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರವಿಚಂದ್ರ ಯಾನೆ ರವಿ (52ವ.)ಮೃತಪಟ್ಟವರು.

ಮೆಸ್ಕಾಂ ವಿಟ್ಲ ಉಪಕೇಂದ್ರದ ಮಾಣಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರು ಕೆದಿಲ, ಪಾಟ್ರಕೋಡಿ, ಮಿತ್ತೂರು, ಗಡಿಯಾರ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಾ ಚಿರಪರಿಚಿತರಾಗಿದ್ದರು.ಅ.3ರಂದು ಕೆದಿಲ ಭಾಗದಿಂದ ವಿದ್ಯುತ್ ಸಮಸ್ಯೆ ಕುರಿತು ಕರೆ ಬಂದ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳಿ ದುರಸ್ತಿ ಕಾರ್ಯ ನಡೆಸುತ್ತಿದ್ದ ವೇಳೆ ಅವರು ವಿದ್ಯುತ್ ಆಘಾತಕ್ಕೊಳಗಾದರು. ಅಸ್ವಸ್ಥಗೊಂಡ ಅವರನ್ನು ತಕ್ಷಣ ಪುತ್ತೂರು ಆಸ್ಪತ್ರೆಗೆ ಕರೆತರಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದರು. ಮೃತರು ಪತ್ನಿ ಚಂದ್ರಕಲಾ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.
ಶಾಸಕ ಅಶೋಕ್ ರೈ ಭೇಟಿ: ವಿದ್ಯುತ್ ಶಾಕ್ ನಿಂದ ಮೃತಪಟ್ಟ ರವಿಚಂದ್ರ ಅವರ ಅಂತಿಮದರ್ಶನ ಪಡೆದ ಶಾಸಕ ಅಶೋಕ್ ರೈ ಯವರು ಕುಟುಂಬಕ್ಕೆ ಸಾಂತ್ವನ ತಿಳಿಸಿದರು.

