ಕರಾವಳಿರಾಜಕೀಯ

ಎಸ್‌ಡಿಪಿಐ ಕಬಕ ಬ್ಲಾಕ್ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ


ಪುತ್ತೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕಬಕ ಬ್ಲಾಕ್ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ನಡೆಯಿತು.

ಸಭೆಯಲ್ಲಿ ಸಮೀರ್ ಮುರ ಅವರನ್ನು ಅಧ್ಯಕ್ಷರಾಗಿ, ಕರೀಂ ಬೀಟಿಗೆ ಅವರನ್ನು ಉಪಾಧ್ಯಕ್ಷರಾಗಿ, ಶಾಕಿರ್ ಕಬಕ ಅವರನ್ನು ಕಾರ್ಯದರ್ಶಿಯಾಗಿ, ನೌಷದ್ ಉರಿಮಜಲು ಅವರನ್ನು ಜೊತೆ ಕಾರ್ಯದರ್ಶಿಯಾಗಿ ಹಾಗೂ ಬದ್ರುದ್ದೀನ್ ಪೋಳ್ಯ ಅವರನ್ನು ಕೋಶಾಧಿಕಾರಿಯಾಗಿ ಆಯ್ಕೆ ಮಾಡಲಾಯಿತು.


ಇದೇ ವೇಳೆ ಸಜ್ಜಾದ್ ಮುರ ಹಾಗೂ ಫಾರೂಕ್ ತವಕ್ಕಲ್ ಅವರನ್ನು ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು.
ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಜೊತೆ ಕಾರ್ಯದರ್ಶಿ ರಹೀಂ ಪುತ್ತೂರು ಅವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಉಸ್ಮಾನ್ ಎ. ಕೆ., ಸದಸ್ಯರಾದ ಸದ್ದಾಂ ಮುರ, ಅಝೀಝ್ ಕಬಕ ಹಾಗೂ ಕಬಕ ಬ್ಲಾಕ್‌ನ ವಿವಿಧ ಬ್ರಾಂಚ್‌ಗಳ ನಾಯಕರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

error: Content is protected !!