ವಯನಾಡು: ಭಾರೀ ಭೂಕುಸಿತ, ಹಲವರು ಸಿಲುಕಿರುವ ಶಂಕೆ
ಸೋಮವಾರ ರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ಕೇರಳದ ವಯನಾಡ್ ಜಿಲ್ಲೆಯ ಮೇಪ್ಪಾಡಿ ಸಮೀಪ ಕಲ್ಲಾಡಿಯಲ್ಲಿ ಮಂಗಳವಾರ ಭೂಕುಸಿತ ಸಂಭವಿಸಿದ್ದು ಅವಶೇಷಗಳ ಅಡಿ ಕೆಲವರು ಸಿಲುಕಿರುವ ಸಾಧ್ಯತೆ ಇದೆ ಎನ್ನುವ ಶಂಕೆ ವ್ಯಕ್ತವಾಗಿದೆ.

ವಯನಾಡ್ ಹಾಗೂ ಮಲಪ್ಪುರಂ ಜಿಲ್ಲೆಗಳನ್ನು ಸಂಪರ್ಕಿಸುವ ಸುರಂಗ ಮಾರ್ಗದ ಕಾಮಗಾರಿ ನಡೆಯುತ್ತಿದ್ದ ಕಲ್ಲಾಡಿಯಲ್ಲಿರುವ ಸೇತುವೆ ಬಳಿ ಭೂಕುಸಿತ ಉಂಟಾಗಿದೆ.
2024 ರ ಜುಲೈ ತಿಂಗಳಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಸುಮಾರು 300 ಜನರು ಸಾವನ್ನಪ್ಪಿ ಎರಡು ಗ್ರಾಮಗಳು ನಾಶವಾಗಿದ್ದವು. ಸದ್ಯ ಸ್ಥಳದಲ್ಲಿ ಎನ್‌ಡಿಆರ್‌ಎಫ್ ತಂಡಗಳು ಮೊಕ್ಕಾಂ ಹೂಡಿವೆ.
ವಯನಾಡ್ ಮತ್ತು ಕೋಯಿಕ್ಕೋಡ್‌ನಲ್ಲಿ ಸುರಂಗದ ನಿರ್ಮಾಣ ಕಾರ್ಯ ಎರಡೂ ಕಡೆಯಿಂದ ನಡೆಯುತ್ತಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ನಿರ್ಮಾಣ ಕಾರ್ಯ ಉದ್ಘಾಟನೆಯಾಯಿತು. ಸುರಂಗ ಕಾಮಗಾರಿ ನಡೆಸುತ್ತಿದ್ದ ಕಾರ್ಮಿಕರು ಅ ಪ್ರದೇಶದಲ್ಲಿಯೇ ತಾತ್ಕಾಲಿಕ ಕ್ಯಾಂಪ್‌ಗಳಲ್ಲಿ ತಂಗುತ್ತಿದ್ದರು.





