ಉಬಾರ್ ಕಂಬಳೋತ್ಸವಕ್ಕೆ ಸಚಿವ ಜಾರಕಿಹೊಳಿಗೆ ಆಮಂತ್ರಣ
ಪುತ್ತೂರು: ಮಾ.28ರಂದು ನಡೆಯುವ ಉಪ್ಪಿನಂಗಡಿ ವಿಜಯವಿಕ್ರಮ ಕಂಬಳ – ಉಬಾರ್ ಕಂಬಳೋತ್ಸವಕ್ಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರಿಗೆ ಆಮಂತ್ರಣ ನೀಡಲಾಯಿತು.

ಕಂಬಳದ ರುವಾರಿ ಶಾಸಕ ಅಶೋಕ್ ರೈ ಅವರು ಸಚಿವರಿಗೆ ವಿಧಾನ ಸೌಧದ ಕಚೇರಿಯಲ್ಲಿ ಆಮಂತ್ರಣ ನೀಡಿದರು. ಕಂಬಳಕ್ಕೆ ಸಚಿವರು ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಆರ್ಯಾಪು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಚ್.ಮಹಮ್ಮದಾಲಿ, ಉದ್ಯಮಿ ರೋಶನ್ ರೈ ಬನ್ನೂರು ಜೊತೆಗಿದ್ದರು.



