ಇರಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 100ಕ್ಕೂ ಅಧಿಕ ವಿದ್ಯಾರ್ಥಿಗಳು ಮೃತ್ಯು
ಟೆಹ್ರಾನ್: ಅಮೆರಿಕ-ಇಸ್ರೇಲ್ ಜಂಟಿಯಾಗಿ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್ ನ 100ಕ್ಕೂ ಅಧಿಕ ವಿದ್ಯಾರ್ಥಿನಿಗಳು ಸಾವನ್ನಪ್ಪಿದ್ದಾರೆ. ಮಿನಾಬ್ ನಗರದಲ್ಲಿ ದಾಳಿ ನಡೆದಾಗ ಈ ಘಟನೆ ನಡೆದಿದೆ ಎಂದು ಇರಾನ್ ಸರ್ಕಾರದ ನ್ಯೂಸ್ ಏಜೆನ್ಸಿ IRNA ವರದಿ ಮಾಡಿದೆ.

ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿ ವೇಳೆ ಇರಾನ್‌ನಾದ್ಯಂತ ಹಲವಾರು ಸ್ಥಳಗಳನ್ನು ಗುರಿಯಾಗಿಸಿಕೊಂಡಿವೆ. ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರಿಗೆ ಸಂಬಂಧಿಸಿದ ಕಚೇರಿಗಳ ಬಳಿ ಕೆಲವು ಆರಂಭಿಕ ದಾಳಿಗಳು ಸಹ ವರದಿಯಾಗಿವೆ.
ಎಂಟು ತಿಂಗಳಲ್ಲಿ ಎರಡನೇ ಬಾರಿಗೆ ಅಮೆರಿಕ ಇರಾನ್ ವಿರುದ್ಧ ಮಿಲಿಟರಿ ಪಡೆ ಬಳಸಿದ್ದು, ವೈಮಾನಿಕ ದಾಳಿ ಮತ್ತಷ್ಟು ಸಂಘರ್ಷ ಹೆಚ್ಚಿಸುವ ಸಾಧ್ಯತೆಯಿದೆ. ಪರಮಾಣು ಕಾರ್ಯಕ್ರಮ ನಿಲ್ಲಿಸುವಂತೆ ಇರಾನ್ ಮೇಲೆ ಪದೇ ಪದೇ ಒತ್ತಡ ಮತ್ತು ಈ ಪ್ರದೇಶದಲ್ಲಿ ಅಮೆರಿಕದ ಸೈನಿಕರ ನಿಯೋಜನೆ ಸೇರಿದಂತೆ ಹಲವು ವಾರದಿಂದ ಉದ್ವಿಗ್ನತೆ ಹೆಚ್ಚಾದ ಬಳಿಕ ದಾಳಿ ನಡೆಸಲಾಗಿದೆ.





