ಪುತ್ತೂರು: ಜ.26ರಂದು ಶಾಸಕರಿಂದ ಅಹವಾಲು ಸ್ವೀಕಾರ ಇಲ್ಲ

ಪುತ್ತೂರು: ಜನವರಿ 26ರ ಸೋಮವಾರದಂದು ಗಣರಾಜ್ಯೋತ್ಸವ ಕಾರ್ಯಕ್ರಮ ಹಾಗೂ ವಿಧಾನಸಭಾ ಅಧಿವೇಶನ ಇರುವ ಕಾರಣಕ್ಕೆ ಆ ದಿನದಂದು ಶಾಸಕ ಅಶೋಕ್ ರೈ ಅವರು ಕಚೇರಿಯಲ್ಲಿರುವುದಿಲ್ಲ. ಈ ಕಾರಣಕ್ಕೆ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ನಡೆಯುವುದಿಲ್ಲ. ಫೆ.2ರ ಸೋಮವಾರದಂದು ಶಾಸಕರು ಕಚೇರಿಯಲ್ಲಿ ಲಭ್ಯವಿದ್ದು ಆ ದಿನ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ನಡೆಯಲಿದೆ ಎಂದು ಶಾಸಕರ ಅಪ್ತ ಸಹಾಯಕರಾದ ರಂಜಿತ್ ಸುವರ್ಣ ತಿಳಿಸಿದ್ದಾರೆ.


