ಮರ್ಕಝುಲ್ ಹುದಾ ಮಕ್ಕಾ ವಲಯ ಕೋ ಆರ್ಡಿನೇಟರ್ ಆಗಿ ಅಬ್ದುಲ್ ರಝಾಕ್ ಮುಸ್ಲಿಯಾರ್ ರಂತಡ್ಕ ಆಯ್ಕೆ
ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು ಮಕ್ಕಾ ವಲಯದ ಸಂಯೋಜಕರಾಗಿ ಅಬ್ದುಲ್ ರಝಾಕ್ ಮುಸ್ಲಿಯಾರ್ ರಂತಡ್ಕ ಅವರನ್ನು ನೇಮಕ ಮಾಡಲಾಗಿದೆ.

ಮರ್ಕಝುಲ್ ಹುದಾ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಡಾ ಎಮ್ಮೆಸ್ಸೆಮ್ ಝೃನೀ ಕಾಮಿಲ್ ಅವರ ನೇತೃತ್ವದಲ್ಲಿ ಮಕ್ಕಾ ಅಝೀಝಿಯ್ಯಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಆಯ್ಕೆ ನಡೆಸಲಾಯಿತು. ಹಾಜಿ ಅಬ್ದುಲ್ ಹಮೀದ್ ಉಳ್ಳಾಲ ಅಧ್ಯಕ್ಷತೆ ವಹಿಸಿದ್ದರು.
ಮರ್ಕಝುಲ್ ಹುದಾ ಸೌದಿ ರಾಷ್ಟೀಯ ಸಮಿತಿ ಪ್ರಧಾನ ಸಂಚಾಲಕ ಅಬ್ದುಲ್ ರಶೀದ್ ಸಖಾಫಿ ಮಿತ್ತೂರು, ಜಿದ್ದಾ ವಲಯ ಸಂಚಾಲಕ ಮುಸ್ತಫಾ ಸಖಾಫಿ ಗರಗಂದೂರು, ಕೆಸಿಎಫ್ ಜಿದ್ದಾ ವಲಯ ಅಧ್ಯಕ್ಷ ಅಶ್ರಫ್ ಎಮ್ಮೆಸ್ಸೆಮ್ ಕಕ್ಕಿಂಜೆ ಶುಭ ಹಾರೈಸಿದರು ಮಕ್ಕಾ ಪ್ರದೇಶದಲ್ಲಿ ಕುಂಬ್ರ ಮರ್ಕಝುಲ್ ಹುದಾ ಸಂಸ್ಥೆಯ ಪ್ರಚಾರ ಕಾರ್ಯಕ್ರಮಗಳಿಗೆ ನೂತನ ಸಂಯೋಜಕರು ನಾಯಕತ್ವ ಕೊಡಲಿದ್ದಾರೆ.





