ಕ್ರೈಂರಾಷ್ಟ್ರೀಯ

ಮನೆ ಕಳ್ಳತನಕ್ಕೆ ಬಂದು ಕಿಟಕಿಯಲ್ಲಿ ಲಾಕ್ ಆಗಿ ಒದ್ದಾಡಿದ ಕಳ್ಳ!!

ಕಳ್ಳತನಕ್ಕೆ ಯತ್ನಿಸಿದ ಕಳ್ಳನೋರ್ವ ಮನೆಯ ಅಡುಗೆ ಕೋಣೆಯ ಎಕ್ಸಾಸ್ಟ್ ಫ್ಯಾನ್ ಕಿಂಡಿಯಲ್ಲಿ ಸಿಲುಕಿಕೊಂಡಿರುವ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಇಬ್ಬರು ಕಳ್ಳರು ಕಳ್ಳತನಕ್ಕೆ ಯತ್ನಿಸಿದ್ದು ಅದರಲ್ಲಿ ಒಬ್ಬ ಎಕ್ಸಾಸ್ಟ್ ಫ್ಯಾನ್ ಕಿಂಡಿಯಲ್ಲಿ ಒದ್ದಾಡಿದ್ದಾನೆ. ಆತ ಕೊನೆಗೂ ಪೊಲೀಸ್ ವಶವಾಗಿದ್ದಾನೆ.


ಘಟನೆ ನಡೆದಿರುವುದು ರಾಜಸ್ಥಾನದಲ್ಲಿ. ಇಲ್ಲಿನ ನಿವಾಸಿಯೊಬ್ಬರ ಮನೆಯಲ್ಲಿ ಕಳ್ಳತನ ಯತ್ನ ನಡೆದಿದ್ದು ಸುಭಾಷ್ ದಂಪತಿ ಜ.3ರಂದು ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಕಳ್ಳರು ಮನೆಯಲ್ಲಿ ಯಾರೂ ಇಲ್ಲದೇ ಇರುವುದನ್ನು ಗಮನಿಸಿ ಕಳ್ಳತನಕ್ಕೆ ಹೊಂಚು ಹಾಕಿದ್ದಾರೆ. ಅದರಂತೆ ಇಬ್ಬರು ಯುವಕರು ಕಳ್ಳತನಕ್ಕೆ ಬಂದಿದ್ದು ಅದರಲ್ಲಿ ಓರ್ವ ಅಡುಗೆ ಕೋಣೆಯ ಎಕ್ಸಾಸ್ಟ್ ಫ್ಯಾನ್ ಕಿಂಡಿಯ ಮೂಲಕ ಒಳ ನುಸುಳಲು ಯತ್ನಿಸಿದ್ದಾನೆ. ಆದರೆ ದುರದೃಷ್ಟವಶಾತ್ ಕಿಟಕಿಯಲ್ಲಿ ಒಳಗೆ ಹೋಗಲಾಗದೇ ಹೊರ ಬರಲಾಗದ ಸ್ಥಿತಿಯಲ್ಲಿ ಕಿಂಡಿಯಲ್ಲಿ ಸಿಲುಕಿಕೊಂಡಿದ್ದಾನೆ.

ಡಿ.4ರಂದು ದಂಪತಿ ಮನೆಗೆ ಬಂದಿದ್ದಾರೆ. ಈ ವೇಳೆ ಅವರು ಬಂದ ದ್ವಿಚಕ್ರ ವಾಹನದ ಬೆಳಕು ನೇರವಾಗಿ ಅಡುಗೆ ಕೊನೆಯ ಕಿಟಕಿಗೆ ಬಿದ್ದಿದೆ. ಈ ವೇಳೆ ಕಿಟಕಿಯಲ್ಲಿ ವ್ಯಕ್ತಿಯೊಬ್ಬನ ಕಾಲುಗಳು ನೇತಾಡುತ್ತಿರುವುದನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ಬಳಿಕ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಬಂದ ಪೊಲೀಸರು ಸ್ಥಳೀಯರ ಜೊತೆ ಸೇರಿ ಕೆಲ ಗಂಟೆಗಳ ಕಾಲ ಹರಸಾಹಸ ಪಟ್ಟು ಕಳ್ಳನನ್ನು ಹೊರತೆಗೆದಿದ್ದಾರೆ.


ಬಳಿಕ ಪೊಲೀಸರು ಯುವಕನನ್ನು ವಿಚಾರಣೆ ನಡೆಸಿದ ವೇಳೆ ತಾವು ಕಳ್ಳತನಕ್ಕೆ ಬಂದಿದ್ದು ತನ್ನ ಜೊತೆ ಇನ್ನೋರ್ವ ಬಂದಿದ್ದು ಮನೆಯವರನ್ನು ಕಂಡು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಹೇಳಿಕೊಂಡಿದ್ದಾನೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!