ನಾಗರಹಾವು ಕಡಿದು ಮಹಿಳೆ ಮೃತ್ಯು
ಪುತ್ತೂರು: ಹಾವು ಕಡಿದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಶಿಶಿಲ ಗ್ರಾಮದ ಗುಡ್ಡೆ ತೋಟ ನಿವಾಸಿ ಪ್ರೇಮ (55) ಎಂದು ಗುರುತಿಸಲಾಗಿದೆ. ತೋಟದಲ್ಲಿ ಕೆಲಸ ನಿರತವಾಗಿದ್ದಾಗ ನಾಗರ ಹಾವು ಕಡಿದಿದೆ ಎಂದು ಹೇಳಲಾಗಿದೆ. ಹಾವು ಕಡಿದ ಕೂಡಲೇ ಶೌರ್ಯ ವಿಪತ್ತು ತಂಡದ ಸದಸ್ಯರ ಸಹಾಯದೊಂದಿಗೆ ಪ್ರೇಮ ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವಿಷದ ತೀವ್ರ ಪರಿಣಾಮದಿಂದ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.





