ಕರಾವಳಿಕ್ರೈಂ

ಮಂಗಳೂರು: ನಿಷೇಧಿತ ಮಾದಕ ವಸ್ತು  ಎಂಡಿಎಂಎ ಮಾರಾಟ- ಮೂವರ ಬಂಧನ

ಮಂಗಳೂರು: ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿರುವ ಮಾಹಿತಿ ಆಧರಿಸಿ ದಾಳಿ ನಡೆಸಿದ ಉಳ್ಳಾಲ ಪೊಲೀಸರು ಮೂವರನ್ನು ಬಂಧಿಸಿರುವ ಘಟನೆ ನಡೆದಿದೆ. ಬಂಧಿತ ಆರೋಪಿಗಳನ್ನು  ಅಬ್ದುಲ್ ರವೂಫ್ (30), ಶರೀಫ್ ಅಲಿಯಾಸ್ ಅಮೀನ್ (34) ಮತ್ತು ನಿಯಾಜ್ (23) ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ 42 ಗ್ರಾಂ ಎಂಡಿಎಂಎ, ಒಂದು ಕಾರು, ಮೂರು ಮೊಬೈಲ್ ಫೋನ್ ಮತ್ತು 2,500 ರೂ. ನಗದನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ನಿಯಾಜ್ ಎಂಡಿಎಂಎ ಖರೀದಿಸಲು ಸ್ಥಳಕ್ಕೆ ಬಂದಿದ್ದರು ಎಂದು ತಿಳಿದು ಬಂದಿದೆ. ದಾಳಿಯ ಸಮಯದಲ್ಲಿ ಮತ್ತೊಬ್ಬ ಶಂಕಿತ ಆರೋಪಿ ಸ್ಥಳದಿಂದ ಪರಾರಿಯಾಗಿರುವುದಾಗಿ ತಿಳಿದು ಬಂದಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *

error: Content is protected !!