ಕರಾವಳಿ

ಪಣಂಬೂರು ಅಪಘಾತ: ಮೂವರನ್ನು ಕಳೆದುಕೊಂಡ ಮೊಂಟೆಪದವು ಪರಿಸರದಲ್ಲಿ ನೀರವ ಮೌನ

ಮಂಗಳೂರು: ಪಣಂಬೂರು ಸಿಗ್ನಲ್‌ನಲ್ಲಿ ಸರತಿಯಲ್ಲಿ ನಿಂತಿದ್ದ ವೇಳೆ ಎರಡು ಟ್ಯಾಂಕರ್ ಗಳು, ಆಟೊ ರಿಕ್ಷಾ ಮತ್ತು ಕಾರು ಸರಣಿ ಅಪಘಾತಕ್ಕೀಡಾಗಿ ಮೃತಪಟ್ಟ ಮೂವರು ಉಳ್ಳಾಲ ತಾಲೂಕಿನ ಮೊಂಟೆಪದವು ಪರಿಸರದವರಾಗಿದ್ದು ಮೂವರನ್ನು ಕಳೆದುಕೊಂಡ ಮೊಂಟೆಪದವು ಪರಿಸರದಲ್ಲಿ ನೀರವ ಮೌನ ಆವರಿಸಿದೆ.
ಮೃತಪಟ್ಟವರಲ್ಲಿ ಇಬ್ಬರು ಬೀಡಿ ಗುತ್ತಿಗೆದಾರರಾಗಿದ್ದು, ಇನ್ನೊಬ್ಬರು ರಿಕ್ಷಾ ಚಾಲಕರಾಗಿದ್ದಾರೆ. ಮೂವರು ಕೂಡಾ ಸ್ಥಳೀಯವಾಗಿ ಎಲ್ಲರಿಗೂ ಚಿರಪರಿಚಿತರು.



ಆಟೊ ರಿಕ್ಷಾ ಚಾಲಕ ಮೊಯ್ದಿನ್ ಕುಂಞ ಯಾನೆ ಮನ್ಸೂರ್ (25ವ) ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದ ಮರಿಕ್ಕಳ ನಿವಾಸಿಯಾಗಿದ್ದಾರೆ. ಮೊಂಟೆಪದವಿನ ಅಬೂಬಕರ್(65ವ)
ಕಳೆದ ಹಲವು ದಶಕಗಳಿಂದ ಮೊಂಟೆಪದವಿನಲ್ಲಿ ಬೀಡಿ ಗುತ್ತಿಗೆದಾರರಾಗಿದ್ದಾರೆ.
ಮೂಲತ ವರ್ಕಾಡಿ-ನರಿಂಗಾನ ಕಲಿಮಿಂಜ ಬಟ್ಯಡ್ಕ ನಿವಾಸಿ ಇಬ್ರಾಹೀಂ ಬಟ್ಯಡ್ಕ (68ವ) ಕೂಡಾ ಹಲವು ದಶಕಗಳಿಂದ ಬೀಡಿ ಗುತ್ತಿಗೆರರಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!