ಇಳಂತಿಳ ಜ್ಞಾನಭಾರತಿ ಶಾಲೆಯಲ್ಲಿ ‘ಸಿವಿಲ್ ಸರ್ವಿಸ್ ಕ್ಷೇತ್ರದತ್ತ ಪಥಯಾನ’ ಮಾಹಿತಿ ಶಿಬಿರ
ಉಪ್ಪಿನಂಗಡಿ: ಇಳಂತಿಳ ಜ್ಞಾನಭಾರತಿ ಶಾಲೆಯಲ್ಲಿ “ಸಿವಿಲ್ ಸರ್ವಿಸ್ ಕ್ಷೇತ್ರದತ್ತ ಪಥಯಾನ” ಎಂಬ ವಿಷಯದ ಕುರಿತಾಗಿ 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾಹಿತಿ ಶಿಬಿರ ನಡೆಯಿತು.

ಮೊಹಮ್ಮದ್ ಶಿಹಾಬುದ್ದೀನ್ ಪ್ರೇರಣಾದಾಯಕ ಮಾತುಗಳನ್ನಾಡಿದರು. ತಮ್ಮ ಮಾತುಗಳ ಮೂಲಕ ಅವರು ಐಎಎಸ್, ಐಪಿಎಸ್ ಮತ್ತು ಇತರೆ ಸಿವಿಲ್ ಸರ್ವಿಸ್ ಕ್ಷೇತ್ರಗಳಲ್ಲಿ ಅವಕಾಶಗಳನ್ನು ಅನ್ವೇಷಿಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು. ಅವರ ಸಂದೇಶ ವಿದ್ಯಾರ್ಥಿಗಳಲ್ಲಿ ಉತ್ಸಾಹ, ಉದ್ದೇಶ ಮತ್ತು ದೃಢ ನಿಶ್ಚಯವನ್ನು ಹಚ್ಚಿಸುವಂತಾಯಿತು.
ಶಿಹಾಬುದ್ದೀನ್ ಅವರು ಯುಪಿಎಸ್ ಸಿ ಹಾಗೂ ಕೆಎಎಸ್ ಪರೀಕ್ಷಾ ತಯಾರಿ ಅನುಭವವನ್ನು ಹಂಚಿಕೊಂಡು, ಶ್ರಮ ಮತ್ತು ಆತ್ಮವಿಶ್ವಾಸದಿಂದ ಎಲ್ಲವೂ ಸಾಧ್ಯವಿರುತ್ತದೆ ಎಂಬುದನ್ನು ವಿವರಿಸಿದರು.





