ಕರಾವಳಿ

ಇವತ್ತು ಗುಂಡು ಕಾಲಿಗೆ ಬಿದ್ದಿದೆ, ಮುಂದೆ ಗುಂಡುಗಳು ಬೇರೆ ಬೇರೆ ಕಡೆಗೆ ಬೀಳಬಹುದು-ಶಾಸಕರ ಎಚ್ಚರಿಕೆ

ಪುತ್ತೂರು: ಈಶ್ವರಮಂಗಲ ಸಮೀಪ ಅಕ್ರಮ ಗೋಸಾಗಾಟಗಾರನ ಕಾಲಿಗೆ ಪೊಲೀಸರು ಗುಂಡು ಹೊಡೆದಿರುವ ವಿಚಾರವಾಗಿ ಪೊಲೀಸರನ್ನು ಅಭಿನಂದಿಸಿ ಮಾತನಾಡಿದ ಶಾಸಕ ಅಶೋಕ್ ರೈಯವರು ಇಂತಹ ಕಾನೂನು ಬಾಹಿರ ಕೃತ್ಯಗಳನ್ನು ಮಾಡುವವರು ನಿಲ್ಲಿಸುವುದು ಉತ್ತಮ. ಇಲ್ಲದಿದ್ದರೆ ಇವತ್ತು ಗುಂಡು ಕಾಲಿಗೆ ಬಿದ್ದಿದೆ, ಮುಂದೆ ಗುಂಡುಗಳು ಬೇರೆ ಬೇರೆ ಕಡೆಗೆ ಬೀಳಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಅಶೋಕ್ ರೈ



ಇಂತಹ ಕೃತ್ಯಕ್ಕೆ ನಾವು ಕಡಿವಾಣ ಹಾಕುತ್ತಿದ್ದೇವೆ, ಇದರಲ್ಲಿ ಯಾರೂ ಲಾಭ ಮಾಡಲು ಪ್ರಯತ್ನಿಸಬಾರದು. ಒಬ್ಬಿಬ್ಬರು ಮಾಡುವ ಕೃತ್ಯದಿಂದ ಸಮುದಾಯದ ಮೇಲೆ ಗೂಬೆ ಕೂರಿಸುವ ಕೆಲಸ ಆಗುತ್ತಿದೆ ಎಂದು ಶಾಸಕರು ಇಂತಹ ಕೆಲಸ ಯಾರೇ ಮಾಡಿದರೂ ತಕ್ಕ ಶಿಕ್ಷೆ ನೀಡುವ ಕೆಲಸ ಆಗಲಿದೆ, ಪೊಲೀಸರು ಉತ್ತಮ ಕೆಲಸ ಮಾಡಿದ್ದು ಪೊಲಿಸ್ ಇಲಾಖೆ ಜೊತೆ ನಾವಿದ್ದೇವೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!