ಅಂತಾರಾಷ್ಟ್ರೀಯಕರಾವಳಿ

ಸವಣೂರು ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ರಿಯಾದ್ ಘಟಕ: ನೂತನ ಪದಾಧಿಕಾರಿಗಳ ಆಯ್ಕೆ

ಪುತ್ತೂರು: ಸವಣೂರು ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ರಿಯಾದ್ ಘಟಕದ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಸೆ.4ರಂದು ರಿಯಾದ್ ಶಿಫಾದ ಅನಸ್ ಹೌಸ್‌ನಲ್ಲಿ ನಡೆಯಿತು.

ಅಬ್ಬಾಸ್ ಬಸ್ತಿ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಗೌರವಾಧ್ಯಕ್ಷರಾಗಿ ಕಲಂದರ್ ಅತ್ತಿಕರೆ, ಅಧ್ಯಕ್ಷರಾಗಿ ರಫೀಕ್ ಅತ್ತಿಕರೆ, ಕಾರ್ಯದರ್ಶಿಯಾಗಿ ಬಶೀರ್ ಚೆನ್ನಾರ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಹನೀಫ್ ಕಡಬ, ಕೋಶಾಧಿಕಾರಿಯಾಗಿ ನೌಫಲ್ ಕೊಡಿಪ್ಪಾಡಿ, ಜೊತೆ ಕಾರ್ಯದರ್ಶಿಯಾಗಿ ಆಬಿದ್ ಮಾಂತೂರು ಆಯ್ಕೆಯಾದರು.

ವಾರ್ಷಿಕ ವರದಿ ಮಂಡಿಸಿದ ಬಶೀರ್ ಕೆಲೆಂಬಿರಿಯವರು ನಮ್ಮ ಸಮಿತಿಯು ಕಳೆದ 27 ವರ್ಷಗಳಿಂದ ಕಾರ್ಯಾಚರಿಸಿದ್ದು ಊರಿನ ಅಭಿವೃದ್ದಿ ಕಾರ್ಯಗಳಿಗೆ, ಬಡ ಅನಾಥ ಹೆಣ್ಮಕ್ಕಳ ವಿವಾಹ ಕಾರ್ಯಕ್ಕೆ ನೆರವು ಸೇರಿದಂತೆ ಧಾರ್ಮಿಕ, ಸಾಮಾಜಿಕ ಕಾರ್ಯಗಳಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ ಎಂದು ಹೇಳಿದರು.
ಮುಂದಿನ ಒಂದು ವರ್ಷದೊಳಗೆ ಹತ್ತು ಲಕ್ಷ ರೂ. ವೆಚ್ಚದಲ್ಲಿ ಬಡ ಕುಟುಂಬಕ್ಕೆ ಮನೆ ಅಥವಾ ಬಡ ಕುಟುಂಬದ ಹೆಣ್ಮಗಳ ವಿವಾಹ ಮಾಡಿಕೊಡುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ಅಶ್ರಫ್ ಬಿಸಿ, ಶಾಫಿ ಚಾಪಳ್ಳ, ಸಲ್ಮಾನ್ ಕಡಬ, ಸಿಯಾನ್ ಕೆನರಾ, ಮುಸ್ತಫ ಚೆನ್ನಾರ್, ಇರ್ಫಾನ್, ನಿಝಾಮ್ ಪಡೀಲ್, ತೌಸೀಫ್ ಬೆಳಂದೂರು ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಅನ್ಸಾರ್ ಅರಿಗಮಜಲು ವಂದಿಸಿದರು

Leave a Reply

Your email address will not be published. Required fields are marked *

error: Content is protected !!