ಡಾ.ಹರ್ಷ ಕುಮಾರ್ ರೈ ಮಾಡಾವು
‘ಸಮಾಜ ರತ್ನ’ ಪ್ರಶಸ್ತಿಗೆ ಆಯ್ಕೆ

ಪುತ್ತೂರು: ಕರ್ನಾಟಕ ರಾಜ್ಯ ಭಾವೈಕ್ಯತಾ ಪರಿಷತ್ ವತಿಯಿಂದ ಸಾಧಕರಿಗೆ ನೀಡುವ ‘ಸಮಾಜ ರತ್ನ’ ಪ್ರಶಸ್ತಿಗೆ ಉದ್ಯಮಿ, ಸಮಾಜ ಸೇವಕ ಡಾ.ಹರ್ಷ ಕುಮಾರ್ ರೈ ಮಾಡಾವು ಆಯ್ಕೆಯಾಗಿದ್ದು ಸೆ.14ರಂದು ಮಂಗಳೂರಿನ ದೇರಳಕಟ್ಟೆಯಲ್ಲಿ ನಡೆಯುವ ರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ ಖಾದರ್ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಸ್ಥೆಯ ಗೌರವಾಧ್ಯಕ್ಷ ನಿವೃತ್ತ ಡಿ.ಸಿ.ಪಿ ಜಿ.ಎ ಬಾವಾ ತಿಳಿಸಿದ್ದಾರೆ. ಡಾ.ಹರ್ಷ ಕುಮಾರ್ ರೈ ಉದ್ಯಮವನ್ನು ನಡೆಸುತ್ತಿದ್ದು ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದಾರೆ.