ಪುತ್ತೂರು: ‘ಮೆಡ್‌ಲ್ಯಾಂಡ್ ಸ್ಪೆಷಾಲಿಟಿ’ ಆಸ್ಪತ್ರೆ ನಿರ್ಮಾಣದ ಮೂಲಕ ಜನರ ಬಹುಕಾಲದ ಕನಸೊಂದು ನನಸಾಗಿದೆ-ಅಮ್ಜದ್ ಖಾನ್
ಪುತ್ತೂರು ತಾಲೂಕಿಗೆ ಸಂಬಂಧಿಸಿ ಅಗತ್ಯವಾಗಿ ಬೇಕಾಗಿದ್ದ ಜನರ ಬಹುಕಾಲದ ಬೇಡಿಕೆಯೂ ಆಗಿದ್ದ ಸುಸಜ್ಜಿತ ಆಸ್ಪತ್ರೆಯೊಂದನ್ನು ಪುತ್ತೂರು ಹೊರ ವಲಯದ ಸಂಪ್ಯದಲ್ಲಿ ನಿರ್ಮಾಣ ಮಾಡುವ ಮೂಲಕ ಉದ್ಯಮಿ ಅಶ್ರಫ್ ಕಮ್ಮಾಡಿ ಮಾದರಿಯಾಗಿದ್ದಾರೆ ಎಂದು ಸೌದಿ ಅರೇಬಿಯಾ ರಖ್ವಾನಿ ಮೆಡಿಕಲ್ ಕಂಪೆನಿಯ ಸಿಇಒ ಹಾಗೂ ಎಜುಕೇಷನಲ್ ಎಕ್ಸಲೆನ್ಸ್ ಫೌಂಡೇಶನ್ ನ ಅಧ್ಯಕ್ಷರೂ ಆಗಿರುವ ಅಮ್ಜದ್ ಖಾನ್ ಪೋಳ್ಯ ತಿಳಿಸಿದ್ದಾರೆ.

ಪುತ್ತೂರಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಬೇಕೆನ್ನುವುದು ಜನರ ಹಲವು ವರ್ಷಗಳ ಕನಸಾಗಿದ್ದು ಆ ಕನಸು ಇದೀಗ ನನಸಾಗಿದೆ. ಸರ್ವ ಸುಸಜ್ಜಿತವಾಗಿ ನಿರ್ಮಾಣಗೊಂಡು ಪರಿಪೂರ್ಣ ಆರೋಗ್ಯ ಸೇವೆಗೆ ಸಿದ್ದಗೊಳ್ಳುತ್ತಿರುವ ‘ಮೆಡ್‌ಲ್ಯಾಂಡ್ ಸ್ಪೆಷಾಲಿಟಿ’ ಆಸ್ಪತ್ರೆ ಮುಂದಿನ ದಿನಗಳಲ್ಲಿ ತಜ್ಞ ವೈದ್ಯರುಗಳ ಸೇವೆಯೊಂದಿಗೆ ಸಾರ್ವಜನಿಕರಿಗೆ ಅತ್ಯುತ್ತಮ ರೀತಿಯ ಆರೋಗ್ಯ ಸೇವೆಯನ್ನು ನೀಡುವ ಮೂಲಕ ಮಾದರಿ ಆಸ್ಪತ್ರೆಯಾಗಿ ಹೆಸರುಗಳಿಸಲಿ ಎನ್ನುವ ಆಶಯ ನಮ್ಮದಾಗಿದ್ದು ಮೆಡ್‌ಲ್ಯಾಂಡ್ ಆಸ್ಪತ್ರೆಯ ಚೇರ್‌ಮೆನ್ ಅಶ್ರಫ್ ಕಮ್ಮಾಡಿ ಮತ್ತು ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಅಮ್ಜದ್ ಖಾನ್ ಪೋಳ್ಯ ತಿಳಿಸಿದ್ದಾರೆ.