ಅರಂತೋಡು: ಕಲಾ ವಿಭಾಗದಲ್ಲಿ ಶೇಕಡಾ.96.16 ಅಂಕ ಪಡೆದು ಕಾಲೇಜಿನ ಶೈಕ್ಷಣಿಕ ಸಾಧನೆಯಲ್ಲಿ ಹೊಸ ದಾಖಲೆ ಬರೆದ ವಿದ್ಯಾ ಬಿ
ಅರಂತೋಡು: ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ವಿದ್ಯಾ ಬಿ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ
ಕನ್ನಡ 99, ಇಂಗ್ಲಿಷ್ 94, ಇತಿಹಾಸ 98, ಅರ್ಥಶಾಸ್ತ್ರ 95 , ಸಮಾಜಶಾಸ್ತ್ರ 97 ಮತ್ತು ರಾಜ್ಯ ಶಾಸ್ತ್ರ 94 ಅಂಕಗಳೊಂದಿಗೆ ಕಾಲೇಜಿನ ಶೈಕ್ಷಣಿಕ ಸಾಧನೆಯಲ್ಲಿ ಹೊಸ ದಾಖಲೆಯ 577 ಅಂಕ ಪಡೆದು ಗ್ರಾಮೀಣ ಪ್ರದೇಶದ ಕಾಲೇಜಿಗೆ ಕೀರ್ತಿ ತಂದುಕೊಟ್ಟಿದ್ದಾರೆ. ಇವರು ಅರಂತೋಡು ಗ್ರಾಮದ ಬಾಜಿನಡ್ಕ ಶ್ರೀಮತಿ ಸರೋಜ ಮತ್ತು ವಸಂತ ದಂಪತಿಗಳ ಪುತ್ರಿ.