ಕರಾವಳಿ

ಮೇನಾಲ ಮಧುರಾ ಇಂಟರ್ನ್ಯಾಷನಲ್ ಸ್ಕೂಲ್‌ನಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ


ಪುತ್ತೂರು ಮಧುರಾ ಇಂಟರ್ನ್ಯಾಷನಲ್ ಸ್ಕೂಲ್ ಮೇನಾಲ ಇಲ್ಲಿ 79ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.



ಮುಖ್ಯೋಪಾಧ್ಯಾಯಿನಿ ಪುಷ್ಪಲತಾ ರಾವ್ ಪ್ರಾಸ್ತಾವಿಕ ಭಾಷಣ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಸ್ಥೆಯ ಸಲಹಾ ಸಮಿತಿಯ ಸದಸ್ಯ ಅಬ್ದುಲ್ ರಹ್ಮಾನ್ ಹಾಜಿ ಮೇನಾಲ ಸ್ವಾತಂತ್ರೋತ್ಸವದ ಮಹತ್ವವನ್ನು ತಿಳಿಸಿದರು.

ಪಿಟಿಎ ಉಪಾಧ್ಯಕ್ಷೆ ಫಾತಿಮಾ ಶುಭ ಹಾರೈಸಿದರು. ಎಸ್‌ಪಿಎಲ್ ಮುನ ಫಾತಿಮಾ ಮಕ್ಕಳ ಪಥಸಂಚಲನವನ್ನು ಮುನ್ನಡೆಸಿದರು. ದೈ.ಶಿ.ಶಿಕ್ಷಕಿ ಚಿತ್ರಾ ಮಾರ್ಗದರ್ಶನ ನೀಡಿದರು. ಪುಟಾಣಿಗಳ ವೀರ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ಎಲ್ಲರ ಗಮನ ಸೆಳೆಯಿತು. ನಂತರ ಮಕ್ಕಳ ಮನೋರಂಜನಾ ಕಾರ್ಯಕ್ರಮ ನಡೆಯಿತು. ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮೆನೇಜರ್ ರೈಹಾನ, ಅಡ್ಮಿನ್ ಆಫೀಸರ್ ನಾಸಿರ್, ಅಕಾಡೆಮಿಕ್ ಸಂಯೋಜಕಿ ಝುಬೈದಾ ಸಿ, ಶಿಕ್ಷಕಿಯರು ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಿಕ್ಷಕಿ ಶಫ್ರೀನ ಸ್ವಾಗತಿಸಿದರು. ಶಿಕ್ಷಕಿ ಜಯಂತಿ ವಂದಿಸಿದರು. ಶಿಕ್ಷಕಿ ಜಹೀರಾ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!