ಚೆಂಬು: ಕಾಡಾನೆ ದಾಳಿಗೆ ವ್ಯಕ್ತಿ ಮೃತ್ಯು
ಸುಳ್ಯ: ಆನೆ ದಾಳಿಗೆ ವ್ಯಕ್ತಿಯೋರ್ವರು ಬಲಿಯಾದ ಘಟನೆ ವರದಿಯಾಗಿದೆ. ಚೆಂಬು ಗ್ರಾಮದ ದಬ್ಬಡ್ಕ ಎಂಬಲ್ಲಿ ತಡ ರಾತ್ರಿ ಘಟನೆ ನಡೆದಿದ್ದು ನಡೆದಿದೆ.

ಆ.6ರಂದು ರಾತ್ರಿ ಸುಮಾರು 10.30ರ ವೇಳೆ ಮನೆಯ ಹತ್ತಿರದ ತೋಟದಲ್ಲಿ ನಾಯಿ ಬೋಗಳುತ್ತಿರುವುದನ್ನು ನೋಡಲು ತೋಟದ ಕಡೆಗೆ ಹೋದ ಸಂದರ್ಭದಲ್ಲಿ ದಬ್ಬಡ್ಕ ಕೊಪ್ಪದ ಶಿವಪ್ಪ 72( ವ) ಎಂಬವರ ಮೇಲೆ ಆನೆ ತುಳಿದಿದ್ದು ತಕ್ಷಣವೇ ಅವರನ್ನು ಮನೆಯವರು ಸಂಪಾಜೆ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ದಾರಿ ಮದ್ಯೆ ಮೃತ ಪಟ್ಟಿದ್ದಾರೆನ್ನಲಾಗಿದೆ. ಮೃತದೇಹವನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ