ಕರಾವಳಿಕ್ರೈಂ

ಧರ್ಮಸ್ಥಳ: ಎಸ್ ಐ ಟಿ ತಂಡವನ್ನು ಕಾಡಿನ ಪ್ರದೇಶಕ್ಕೆ ಕರೆದೊಯ್ದ ದೂರುದಾರ

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಹಲವಾರು ಶವಗಳನ್ನು ಹೂತು ಹಾಕಲಾಗಿದೆ ಎಂದು ಅನಾಮಿಕನ ದೂರಿನಂತೆ ಕಳೆದ ಕೆಲ ದಿನಗಳಿಂದ ಮೃತದೇಹಗಳಿಗಾಗಿ ಹುಟುಕಾಟ ಕಾರ್ಯ ನಡೆಯುತ್ತಿದ್ದು ಆ.4ರಂದು ಹೊಸ ಬೆಳವಣಿಗೆ ನಡೆದಿದೆ. ಸಾಕ್ಷಿ ದೂರುದಾರ ಇಂದು ಹೊಸ ಸ್ಥಳಕ್ಕೆ ಎಸ್‌ಐಟಿ ತಂಡವನ್ನು ಕರೆದೊಯ್ದಿದ್ದು ಅಲ್ಲಿ ಕಳೇಬರವೊಂದು ಪತ್ತೆಯಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ.

ಆತ ಈ ಹಿಂದೆ ಗುರುತಿಸಿದ ಸ್ಥಳದಲ್ಲಿ ಕಾರ್ಯಾಚರಣೆ ನಡೆಸದೆ, ಹೊಸ ಸ್ಥಳದಲ್ಲಿ ಹುಡುಕಾಟ ನಡೆಸುವ ವೇಳೆ ಅವಶೇಷಗಳು ಪತ್ತೆಯಾಗಿರುವ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಆದರೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಬೆಳಗ್ಗೆ 11.30ಕ್ಕೆ ಅರಣ್ಯವನ್ನು ಪ್ರವೇಶಿಸಿದ ಎಸ್‌.ಐ.ಟಿ ತಂಡ ನಾಲ್ಕು ಗಂಟೆಯ ವರೆಗೂ ಎಸ್.ಐ.ಟಿ ತಂಡ ಅರಣ್ಯದಿಂದ ಇನ್ನೂ ಹಿರಬಂದಿಲ್ಲ ಎನ್ನಲಾಗುತ್ತಿದೆ.

ಅರಣ್ಯದ ಒಳಗೆ ಎರಡು ಮೂಟೆ ಉಪ್ಪು ಕೂಡಾ ಕೊಂಡೊಯ್ದಿದ್ದಾರೆ ಎನ್ನಲಾಗುತ್ತಿದ್ದು ಇದೆಲ್ಲವೂ ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

Leave a Reply

Your email address will not be published. Required fields are marked *

error: Content is protected !!