ಬಂಟ್ವಾಳ: ನಾಪತ್ತೆಯಾಗಿದ್ದ ಯುವಕನ ಮೃತದೇಹ ನದಿಯಲ್ಲಿ ಪತ್ತೆ

ಬಂಟ್ವಾಳ: ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಬಂಟ್ವಾಳ ತಾಲೂಕಿನ ಕಡೇಶಿವಾಲಯ ನಿವಾಸಿ ಹೇಮಂತ್ ಆಚಾರ್ಯ (21ವ) ಮೃತದೇಹ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬಜಾಲ್ ಮುಗೇರು ಎಂಬಲ್ಲಿ ನೇತ್ರಾವತಿ ನದಿ ಮಧ್ಯ ಭಾಗದಲ್ಲಿ ಪತ್ತೆಯಾಗಿದೆ. ಹೇಮಂತ್ ಆಚಾರ್ಯ ಅವರು ನಾಪತ್ತೆಯಾದ ಬಳಿಕ ಅವರನ್ನು ಹುಡುಕುವ ಕಾರ್ಯ ನಿರಂತರ ಮಾಡಲಾಗಿತ್ತು. ಇದೀಗ ಅವರ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ.