ಕರಾವಳಿ

ಸುಳ್ಯದ ವೈದ್ಯ ವಿದ್ಯಾರ್ಥಿ ಕೆರೆಯಲ್ಲಿ ಮುಳುಗಿ ಮೃತ್ಯು

ಸುಳ್ಯ: ಸುಳ್ಯದ ವೈದ್ಯ ವಿದ್ಯಾರ್ಥಿ ಕೇರಳದ ಕಣ್ಣೂರಿನಲ್ಲಿ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಜು.20ರಂದು ನಡೆದಿದೆ. ಸಹಪಾಠಿಗಳೊಂದಿಗೆ ಕೇರಳದ ಕಣ್ಣೂರಿನ ಗೆಳೆಯನ ಮನೆಗೆ ಹೋಗಿದ್ದ ವೇಳೆ ಮನೆ ಪಕ್ಕದ ಕೆರೆಗೆ ಸ್ನಾನಕ್ಕೆ ಹೋದಾಗ ಈ ಅವಘಡ ಸಂಭವಿಸಿದೆ.

ಸಾಂದರ್ಭಿಕ ಚಿತ್ರ

ಸುಳ್ಯದ ನಿವೃತ್ತ ತಾಲೂಕು ಆರೋಗ್ಯಾಧಿಕಾರಿ ಮಡಪ್ಪಾಡಿ ಗ್ರಾಮದ ಬಾಳಿಕ್ಕಳದ ಡಾ.ನಂದ ಕುಮಾರ್ ರ ಪುತ್ರ, ಆಸ್ತಿಕ್ ರಾಘವ್ (19) ಮೃತಪಟ್ಟ ವಿದ್ಯಾರ್ಥಿ.

ಮಂಗಳೂರಿನ ಎ.ಬಿ.ಶೆಟ್ಟಿ ಡೆಂಟಲ್ ಕಾಲೇಜಿನಲ್ಲಿ ಎರಡನೇ ವರ್ಷದ ದಂತ ವಿಜ್ಞಾನ ಕಲಿಯುತ್ತಿದ್ದ ಆಸ್ತಿಕ್ ರಾಘವ್ ಮಂಗಳೂರಿನಿಂದ ತನ್ನ ಮೂವರು ಸಹಪಾಠಿಗಳೊಂದಿಗೆ ಕೇರಳದ ಕಣ್ಣೂರಿನ ಗೆಳೆಯನ ಮನೆಗೆ ಹೋಗಿದ್ದರು. ಈ ವೇಳೆ ಅವರು ಮನೆ ಪಕ್ಕದ ಕೆರೆಗೆ ಸ್ನಾನಕ್ಕೆ ಹೋದಾಗ ಕಾಲು ಜಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!