ಮಂಗಳೂರು: ಸೈಬರ್ ಕ್ರೈಂ ಪೊಲೀಸ್ ಎಂದು ಹೇಳಿಕೊಂಡು ಬೆದರಿಸಿ ವಂಚಿಸುತ್ತಿದ್ದ ಯುವಕ ಅರೆಸ್ಟ್
ಮಂಗಳೂರು: ಫೇಸ್‌ಬುಕ್ ಖಾತೆ, ಕನ್ನಡ ಮಾಡೆಲ್ಸ್ ಟ್ರೋಲ್ ಮಾಸ್ಟರ್, ಟ್ರೋಲ್ ಬಸ್ಯಾ ಇತ್ಯಾದಿ ಪೇಜ್ ಗಳಲ್ಲಿ ಕಮೆಂಟ್ಸ್ ಹಾಕಿರುವ ವ್ಯಕ್ತಿಗಳಿಗೆ ಕರೆಮಾಡಿ ಬೆಂಗಳೂರಿನ ಸೈಬರ್ ಕ್ರೈಮ್ ಪೊಲೀಸ್ ಠಾಣೆಯ ಸುಶೀಲ್ ಕುಮಾರ ಎಂಬ ಹೆಸರು ಹೇಳಿ ಬೆದರಿಸುತ್ತಿದ್ದ ಆರೋಪಿ ತುಮಕೂರು ಜಿಲ್ಲೆಯ ಅರುಣ್ ಟಿ. (27) ಎಂಬಾತನನ್ನು ಮಂಗಳೂರು ಸೆನ್ ಕ್ರೖಂ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯು ಹಲವರಿಗೆ ಫೋನ್ ಕರೆ ಮಾಡಿ ನಿಮ್ಮ ಮೇಲೆ ದೂರುಗಳು ಬಂದಿದೆ. ನಿಮ್ಮನ್ನು ಅರೆಸ್ಟ್ ಮಾಡುತ್ತೇನೆ ಎಂದು ಹೆದರಿಸಿ, ಅವರಿದ ತನ್ನ ಖಾತೆಗೆ ಹಣ ವರ್ಗಾಯಿಸಿಕೊಳ್ಳುತ್ತಿದ್ದ. ಮಂಗಳೂರಿನ ವ್ಯಕ್ತಿಯೊಬ್ಬರಿಗೆ ಕರೆ ಮಾಡಿ, ಅವರಿಂದ 1,23,000 ರೂ.ವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದ ಈ ಬಗ್ಗೆ ಜು.15ರಂದು ಮಂಗಳೂರು ಸೆನ್ ಕೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈತನ ಮೇಲೆ ಸೈಬರ್ ಪೊರ್ಟಲ್‌ನಲ್ಲಿ 11 ದೂರುಗಳು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ..