ಪುತ್ತೂರು: ಜು.2ರಂದು ಬೀಸಿದ ಗಾಳಿ ಮತ್ತು ಮಳೆಗೆ ಅರಿಯಡ್ಕ ಗ್ರಾಮದ ಮೇಲಿನ ಬಳ್ಳಿಕಾನ ಎಂಬಲ್ಲಿ ಉದಯಕುಮಾರ್ ಎಂಬವರ ಮನೆಯ ಮುಂಭಾಗದ ಶೀಟ್ ಅಳವಡಿಸಿದ ಮಾಡು ಕುಸಿತಗೊಂಡಿದ್ದು ನಷ್ಟ ಸಂಭವಿಸಿದೆ. ಘಟನಾ ಸ್ಥಳಕ್ಕೆ ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ಭೇಟಿ ನೀಡಿದ್ದು ಘಟನೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.