ವಿಮಾನ ದುರಂತ: ಭರದಿಂದ ಸಾಗುತ್ತಿದೆ ರಕ್ಷಣಾ ಕಾರ್ಯಾಚರಣೆ
ಅಹಮ್ಮದಾಬಾದ್ ನಲ್ಲಿ ಭೀಕರ ವಿಮಾನ ಅಪಘಾತ ಸಂಭವಿಸಿದ್ದು ಸುಮಾರು 242 ಜನರನ್ನು ಹೊತ್ತ ವಿಮಾನ ಟೇಕ್ ಆಫ್ ವೇಳೆ ಪತನಗೊಡಿದೆ. 180ಕ್ಕೂ ಅಧಿಕ ಮಂದಿ ಮೃತಪಟ್ಟಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಕೂಡ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಸ್ಥಳದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದ್ದು, ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ. ಘಟನೆಗೆ ಸಂಬಂಧಿಸಿದಂತೆ ಹಲವಾರು ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಕಾರ್ಯ ನಡೆಯುತ್ತಿದೆ.

ತಾಂತ್ರಿಕ ದೋಷದ ಕಾರಣಕ್ಕೆ ಟೇಕ್ ಆಫ್ ಆದ 15 ಕಿ ಮೀಟರ್ ದೂರದಲ್ಲಿ 600 ರಿಂದ 700 ಅಡಿ ಎತ್ತರದಲ್ಲಿ ಹಾರಿರುವಾಗ ವಿಮಾನ ಪತನವಾಗಿದೆ. ಜನ ವಸತಿ ಕಟ್ಟಡ ಮೇಲೆ ಮತ್ತು ಅಲ್ಲೇ ಇರುವ ಹಾರ್ಸ್ ಕ್ಯಾಂಪ್ ಬಳಿ ವಿಮಾನ ಬಿದ್ದಿದೆ ಎಂದು ವರದಿ ತಿಳಿಸಿದೆ.