ಐ.ಪಿ.ಎಲ್ ಟ್ರೋಫಿ ಗೆದ್ದ RCB ತಂಡಕ್ಕೆ ಸಿಕ್ಕಿದ ನಗದು ಬಹುಮಾನ ಎಷ್ಟು ಕೋಟಿ ಗೊತ್ತಾ..?
ಐಪಿಎಲ್ 2025ರ ಫೈನಲ್‌ನಲ್ಲಿ ಆರ್‌ಸಿಬಿ, ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್‌ಗಳಿಂದ ಸೋಲಿಸಿ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 190 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಗುರಿ ಬೆನ್ನಟ್ಟಿದ ಪಂಜಾಬ್ ತಂಡ 184 ರನ್‌ಗಳಿಸಲಷ್ಟೇ ಶಕ್ತವಾಯಿತು.

ಆರ್‌ಸಿಬಿ ಮೊದಲ ಬಾರಿಗೆ ಐಪಿಎಲ್ ಟ್ರೋಫಿ ಪಡೆದುಕೊಂಡಿತು. ಐಪಿಎಲ್‌ನಲ್ಲಿ ಈ ಐತಿಹಾಸಿಕ ಗೆಲುವಿನೊಂದಿಗೆ, ಆರ್‌ಸಿಬಿಯ 17 ವರ್ಷಗಳ ಟ್ರೋಫಿ ಬರ ಕೊನೆಗೊಂಡಿದೆ.
ಐಪಿಎಲ್ 2025 ಟ್ರೋಫಿ ಗೆದ್ದ ನಂತರ, ಆರ್‌ಸಿಬಿಗೆ ಬಹುಮಾನದ ಮೊತ್ತವಾಗಿ ಬರೋಬ್ಬರಿ 20 ಕೋಟಿ ರೂ. ಸಿಗಲಿದೆ. ಮತ್ತೊಂದೆಡೆ, ರನ್ನರ್ ಅಪ್ ಪಂಜಾಬ್ ಕಿಂಗ್ಸ್ ತಂಡಕ್ಕೂ 13 ಕೋಟಿ ರೂ.ಗಳು ಬಹುಮಾನವಾಗಿ ಸಿಗಲಿದೆ. ಕ್ವಾಲಿಫೈಯರ್ ಆಡಿದ ಮುಂಬೈ ಇಂಡಿಯನ್ಸ್ ತಂಡಕ್ಕೆ 7 ಕೋಟಿ ರೂ, ಎಲಿಮಿನೇಟರ್ ಆಡಿದ ಗುಜರಾತ್ ಟೈಟನ್ಸ್ ತಂಡಕ್ಕೆ 6.5 ಕೋಟಿ ರೂ. ಬಹುಮಾನ ಸಿಕ್ಕಿದೆ.